Current Date 28 Jul, 2026

ಕಮಲ್ ಹಾಸನ್ 'ಇಂಡಿಯನ್ -02'ಗೆ ಸೆಡ್ಡು ಹೊಡೆದ ಇಂದ್ರಜಿತ್ ಲಂಕೇಶ್ 'ಗೌರಿ'...!

ಇಂದ್ರಜಿತ್ ಲಂಕೇಶ್ ಅವರ ಸಿನಿಮಾಗಳಲ್ಲಿ ಮೊದಲಿಂದ ಹಾಡುಗಳು ಪ್ರಾಮುಖ್ಯತೆಯನ್ನ ಪಡೆದಿರುತ್ತವೆ. ಇವರು ಆಯ್ಕೆ ಮಾಡಿಕೊಳ್ಳುವ ಟ್ಯೂನಿನಲ್ಲೇ ಜನರನ್ನು ಸಮ್ಮೋಹಕಗೊಳಿಸುವ ಗುಣವಿರುತ್ತದೆ. ಜೊತೆಗೆ ಮನಸಿಗೆ ಹತ್ತಿರವಾದ ಸಾಲುಗಳು ಯಾವಾಗಲೂ ಗೆಲುವು ಸಾಧಿಸುತ್ತದೆ. ಇದಕ್ಕೆ ಮತ್ತೊಂದು ಉದಾಹರಣೆ ಎಂಬಂತೆ ಗೌರಿ ಚಿತ್ರದ 'ಧೂಳ್' ಹಾಡು ಅಕ್ಷರಶಃ ಧೂಳೆಬ್ಬಿಸುತ್ತಿದೆ.

ಹೌದು, ಮೊನ್ನೆಯಷ್ಟೇ ಬಿಡುಗಡೆಯಾದ ಜವಾರಿ ಶೈಲಿಯ ಧೂಳ್ ಹಾಡು, ಇನ್ಸ್ಟಾಗ್ರಾಮ್‌ ಮತ್ತು ಯೂಟ್ಯೂಬ್‌ನಲ್ಲಿ ಟಾಪ್ 5 ಟ್ರೆಂಡಿಂಗ್‌ನಲ್ಲಿದೆ. ಇನ್ನೂ ಈ ಹಾಡು ಇಂದಿನ ಯುವಜನಾಂಗವನ್ನ ಎಷ್ಟರ ಮಟ್ಟಿಗೆ ಸೆಳೆದಿದೆ ಎಂದರೆ ಲಕ್ಷಾಂತರ ಮಂದಿ ಈ ಹಾಡಿಗೆ ರೀಲ್ಸ್ ಮಾಡುತ್ತಿದ್ದಾರೆ.ಸಮರ್ಜಿತ್ ಲಂಕೇಶ್ ಮತ್ತು ಸಾನ್ಯಾ ಅವರಂತೆಯೇ ಹೆಜ್ಜೆ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ.