Current Date 30 Jul, 2026

ದೊಡ್ಡವರ ಸಹವಾಸ ಯಾಕೆ ಬೇಕಿತ್ತು, ರೇಣುಕಾಸ್ವಾಮಿ ಮೆಸೇಜ್ ಮಾಡಿದ್ದೇ ಮೊದಲ ತಪ್ಪು- A4 ರಘು ಪತ್ನಿ ಸಹನಾ ..!

ದರ್ಶನ್ ಜೊತೆ ಜೈಲು ಸೇರಿರುವ 17ಜನರಲ್ಲಿ ರಘು ಕೂಡ ಒಬ್ಬ. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ A4 ಆರೋಪಿಯಾಗಿರೋ ಇವನೇ ರೇಣುಕಾಸ್ವಾಮಿಯನ್ನ ಬೆಂಗಳೂರಿಗೆ ಕರೆದುಕೊಂಡು ಬಂದಿದ್ದು ಅನ್ನುವ ಮಾತು ಇದೆ.

ಚಿತ್ರದುರ್ಗದ ಅಭಿಮಾನಿಗಳ ಸಂಘದ ಅಧ್ಯಕ್ಷ ರಘು, 15 ವರ್ಷಗಳಿಂದ ದರ್ಶನ್‌ ಅಭಿಮಾನಿ. ಇವರನ್ನು ದರ್ಶನ್‌ ಆಗಾಗ್ಗ ಭೇಟಿ ಆಗುತ್ತಿದ್ದ ಎಂದು ಹಲವರು ಹೇಳುತ್ತಾರೆ. ಚಿತ್ರದುರ್ಗದ ಮೇಲೆ ದರ್ಶನ್‌ ಪ್ರಯಾಣ ಬೆಳೆಸಿದಾಗಲೆಲ್ಲಾ ಇವರನ್ನು ಭೇಟಿ ಆಗುತ್ತಿದ್ದರು ಎನ್ನಲಾಗಿದೆ. ದರ್ಶನ್‌ ಚಿತ್ರಗಳು ಬಿಡುಗಡೆ ಆದಾಗ ಈತ, ಚಿತ್ರ ಮಂದಿರದ ಆವರಣದಲ್ಲಿ ಕಟೌಟ್‌ ಅಳವಡಿಸುತ್ತಿದ್ದ. ವೃತ್ತಿಯಲ್ಲಿ ಟ್ಯಾಕ್ಸಿ ಚಾಲಕ ಎಂದು ತಿಳಿದು ಬಂದಿದೆ.