Current Date 22 Sep, 2026

ನ್ಯಾಯಾಧೀಶರ ಮುಂದೆ ದರ್ಶನ್, ಪವಿತ್ರಾ ಗೌಡ ಕಣ್ಣೀರು; 7 ದಿನಗಳ ಕಾಲ ಆರೋಪಿಗಳು ಪೊಲೀಸ್ ಕಸ್ಟಡಿಗೆ

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಅವರನ್ನು ಪೊಲೀಸರ ವಶಕ್ಕೆ ನೀಡಲಾಗಿದೆ. ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ವಾದ ಆಲಿಸಿ ಬಳಿಕ ಪ್ರಕರಣದಲ್ಲಿ ದರ್ಶನ್, ಪವಿತ್ರಾ ಗೌಡ ಸೇರಿದಂತೆ 13 ಮಂದಿ ಆರೋಪಿಗಳನ್ನು 7 ದಿನ ಪೊಲೀಸ್ ವಶಕ್ಕೆ ನೀಡಿ ನ್ಯಾಯಧೀಶರದಾದ ವಿಶ್ವನಾಥ್ ಆದೇಶ ಹೊರಡಿಸಿದ್ದಾರೆ


ಇನ್ನು ಪ್ರಕರಣದಲ್ಲಿ ನಟಿ ಪವಿತ್ರಾ ಗೌಡ ಎ1, ನಟ ದರ್ಶನ್ ಎ2 ಆಗಿದ್ದಾರೆ. ಇನ್ನು ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ನ್ಯಾಯಧೀಶರ ಮುಂದೆ ಕೈಕಟ್ಟಿ ದರ್ಶನ್ ನಿಂತಿದ್ದರು. ನ್ಯಾಯಾಧೀಶರ ಎದುರು ದರ್ಶನ್ ಹಾಗೂ ಪವಿತ್ರಾ ಗೌಡ ಕಣ್ಣೀರು ಹಾಕಿರುವುದಾಗಿ ವರದಿಯಾಗಿದೆ