Current Date 22 Sep, 2026

ಹೊಸ ಚಿತ್ರಕ್ಕೆ ಕಥೆ ಬರೆದು ಲಕ್ಷ ಗೆಲ್ಲಿ; ಸಿನಿಮಾದಲ್ಲಿ ಕೆಲಸ ಮಾಡುವ ಸುವರ್ಣಾವಕಾಶವೂ ಕಾದಿದೆ

ಕನ್ನಡ ಚಿತ್ರರಂಗದಲ್ಲಿ ವರ್ಷಕ್ಕೆ 200ಕ್ಕೂ ಅಧಿಕ ಸಿನಿಮಾಗಳು ಬಿಡುಗಡೆ ಆಗುತ್ತವೆ. ಆದರೆ ಸಕ್ಸಸ್ ರೇಟ್ ಮಾತ್ರ ಬಹಳ ಕಮ್ಮಿ. ಕೇವಲ ಬೆರಳೆಣಿಯಷ್ಟು ಸಿನಿಮಾಗಳಷ್ಟೇ ಗೆಲ್ಲುತ್ತವೆ. ಉಳಿದ ಬಹುತೇಕ ಸಿನಿಮಾಗಳು ಸೋತು ನಷ್ಟ ಅನುಭವಿಸುತ್ತವೆ. ಕನ್ನಡ ಸಿನಿಮಾಗಳಲ್ಲಿ ಒಳ್ಳೆ ಕಥೆಗಳು ಇಲ್ಲ ಎನ್ನುವುದು ಬಹಳ ದೊಡ್ಡ ಆರೋಪ.


ಒಂದು ಸಿನಿಮಾ ಗೆಲ್ಲಬೇಕು ಅಂದ್ರೆ ಕಥೆ ಬಹಳ ಮುಖ್ಯವಾಗುತ್ತದೆ. ಆದರೆ ಕನ್ನಡ ಚಿತ್ರರಂಗದಲ್ಲಿ ಕಥೆಗಾರರನ್ನು ಪ್ರೋತ್ಸಾಹಿಸುವವರು ಕಮ್ಮಿ. ಇನ್ನು ದಶಕಗಳ ಕಾಲ ರೀಮೆಕ್ ಹಾವಳಿ ಹೆಚ್ಚಾಗಿ ಉತ್ತಮ ಕಥೆಗಳು ನಮ್ಮಲ್ಲಿ ಬರುತ್ತಿರಲಿಲ್ಲ. ಪ್ಯಾನ್ ಇಂಡಿಯಾ ಜಮಾನ ಶುರುವಾಗಿ ರೀಮೆಕ್‌ಗೆ ಭಾಗಶಃ ಬ್ರೇಕ್ ಬಿದ್ದಿದೆ. ಇದೀಗ ಸ್ಟಾರ್ ನಟರು, ಫಿಲ್ಮ್ ಮೇಕರ್ಸ್ ಹೊಸ ಹೊಸ ಕಥೆಗಳ ಹುಡುಕಾಟದಲ್ಲಿದ್ದಾರೆ.