Current Date 28 Jul, 2026

'ಕಬ್ಜ' ನಿರ್ಮಾಣ ಸಂಸ್ಥೆಗೆ ಕೇಂದ್ರದಿಂದ ಪ್ರಶಂಸಾ ಪತ್ರ; ಆರ್. ಚಂದ್ರು ಖುಷ್

ಆರ್‌. ಚಂದ್ರು ನಿರ್ದೇಶನದ 'ಕಬ್ಜ' ಸಿನಿಮಾ ಕಳೆದ ವರ್ಷ ತೆರೆಗಪ್ಪಳಿಸಿತ್ತು. ಉಪೇಂದ್ರ ಹೀರೊ ಆಗಿ ನಟಿಸಿದ್ದ ಚಿತ್ರದಲ್ಲಿ ಸುದೀಪ್ ಹಾಗೂ ಶಿವಣ್ಣ ಅತಿಥಿ ಪಾತ್ರಗಳಲ್ಲಿ ಮಿಂಚಿದ್ದರು. 'ಕೆಜಿಎಫ್' ಸಿನಿಮಾ ರೀತಿಯಲ್ಲೇ ಈ ಚಿತ್ರವನ್ನು ಕಟ್ಟಿಕೊಡುವ ಪ್ರಯತ್ನ ನಡೆದಿತ್ತು. ಆದರೆ ಚಿತ್ರಕ್ಕೆ ಭಾರೀ ಹಿನ್ನೆಡೆಯಾಗಿತ್ತು.

ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ ಬಿಡುಗಡೆಯಾಗಿದ್ದ ಸಿನಿಮಾ ಪ್ರೇಕ್ಷಕರನ್ನು ರಂಜಿಸುವಲ್ಲಿ ವಿಫಲವಾಗಿತ್ತು. ಮೇಕಿಂಗ್ ವಿಚಾರದಲ್ಲಿ ಗಮನ ಹರಿಸಿದ್ದ ಆರ್‌. ಚಂದ್ರು ಕಥೆ, ಚಿತ್ರಕಥೆ, ಗ್ರಾಫಿಕ್ಸ್ ವಿಚಾರದಲ್ಲಿ ನಿರಾಸೆ ಮೂಡಿಸಿದ್ದರು. ಆನಂದ್ ಪಂಡಿತ್ ಹಾಗೂ ಅಲಂಕಾರ್ ಪಾಂಡಿಯನ್ ಜೊತೆ ಸೇರಿ ಶ್ರೀ ಸಿದ್ದೇಶ್ವರ ಎಂಟರ್‌ಪ್ರೈಸಸ್ ಬ್ಯಾನರ್‌ ಅಡಿಯಲ್ಲಿ ಖುದ್ದು ಚಂದ್ರು ಚಿತ್ರ ನಿರ್ಮಿಸಿದ್ದರು.