Current Date 31 Jul, 2026

ನವರಾತ್ರಿಯ ಮೊದಲ ದಿನ ಬೆಳ್ಳಿತೆರೆಯಲ್ಲಿ ಧಗಧಗಿಸಲಿದ್ದಾಳೆ ಭೈರಾದೇವಿ..!

ರಾಧಿಕಾ ಕುಮಾರಸ್ವಾಮಿ ಅವರ ಪಾಲಿಗೆ ಈಗ ಎರಡನೇ ಸುತ್ತಿನ ಪರ್ವ ಕಾಲವೊಂದು ಆರಂಭವಾಗುವ ಲಕ್ಷಣ ಕಂಡು ಬರುತ್ತಿದೆ. ಇದಕ್ಕೆ ಪೂರಕವಾಗಿ ವರ್ಷದವರೆಗೆ ತೆರೆ ಮರೆಗೆ ಸರೆದಿದ್ದ ಭೈರಾದೇವಿ ಮತ್ತೊಮ್ಮೆ ಸದ್ದು ಮಾಡಲು ಶುರು ಮಾಡಿದೆ. ಚಿತ್ರದ ಬಿಡುಗಡೆಗೆ ಮುಹೂರ್ತ ಕೂಡ ಫಿಕ್ಸ್ ಆಗಿದೆ.