Current Date 31 Jul, 2026

ಕನ್ನಡ ಕಿರುತೆರೆಯ 'ಅರುಂಧತಿ' ತೆಲುಗಿನಲ್ಲೂ ಬ್ಯುಸಿ: ಯಾರೀ ನಟಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳ ಪೈಕಿ 'ಕರಿಮಣಿ'ಯೂ ಒಂದು. 'ಕರಿಮಣಿ' ಧಾರಾವಾಹಿಯಲ್ಲಿ ನಾಯಕ ಕರ್ಣನ ಅಮ್ಮ ಅರುಂಧತಿಯಾಗಿ ಅಭಿನಯಿಸುತ್ತಿರುವ ಅನುಷಾ ರಾವ್ ಕನ್ನಡ ಸೇರಿದಂತೆ ಪರಭಾಷೆಯ ಕಿರುತೆರೆಯಲ್ಲಿಯೂ ಗುರುತಿಸಿಕೊಂಡಿರುವ ಬೆಡಗಿ. ಅರುಂಧತಿಯಾಗಿ ಕಿರುತೆರೆ ವೀಕ್ಷಕರನ್ನು ಸೆಳೆಯುತ್ತಿರುವ ಅನುಷಾ ರಾವ್ ಅವರಿಗೆ ಕಿರುತೆರೆಯಲ್ಲಿ ಜನಪ್ರಿಯತೆ ನೀಡಿದ್ದು ರಾಧಿಕಾ ಪಾತ್ರ. ಹೌದು, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ 'ಅಗ್ನಿಸಾಕ್ಷಿ'ಯಲ್ಲಿ ನಾಯಕ ಸಿದ್ದಾರ್ಥ್‌ ಅಣ್ಣ ಗೌತಮ್‌ನ ಹೆಂಡತಿ ರಾಧಿಕಾ ಪಾತ್ರದಲ್ಲಿ ಅನುಷಾ ರಾವ್ ನಟಿಸಿದ್ದರು. ರಾಧಿಕಾ ಪಾತ್ರದ ಮೂಲಕ ಕಿರುತೆರೆಯಲ್ಲಿ ಹೊಸ ಹವಾ ಸೃಷ್ಟಿ ಮಾಡಿದ್ದ ಅನುಷಾ ರಾವ್ ಅವರ ನಟನಾ ಪಯಣಕ್ಕೆ ಮುನ್ನುಡಿ ಬರೆದಿದ್ದು 'ದುರ್ಗಾ' ಧಾರಾವಾಹಿ.