Current Date 16 Oct, 2024

'ಸಪ್ತಸಾಗರ'ದಾಚೆ ಹೇಮಂತ್ ರಾವ್‌ಗೆ ಅವಮಾನ, ನಿಮ್ಮ 'ಪ್ರಶಸ್ತಿ' ನನಗೆ ಬೇಡ ಎಂದು ಕಿಡಿ ಕಾರಿದ ನಿರ್ದೇಶಕ...!

ಪ್ರಯೋಗಾತ್ಮಕ ಚಿತ್ರಗಳ ಮೂಲಕವೇ ಕನ್ನಡಿಗರ ಹೃದಯವನ್ನು ಗೆದ್ದವರು ಹೇಮಂತ್ ರಾವ್. ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಕವಲು ದಾರಿ, ಸಪ್ತಸಾಗರದಾಚೆ ಎಲ್ಲೋ ಭಾಗ ಒಂದು ಮತ್ತು ಭಾಗ ಎರಡು ಚಿತ್ರಗಳನ್ನು ನಿರ್ದೇಶಿಸಿರುವ ಹೇಮಂತ್ ರಾವ್ ಹಿಂದಿಯಲ್ಲಿ ಬ್ಲಾಕ್ ಬಸ್ಟರ್ ಆಗುವುದಲ್ಲದೇ ರಾಷ್ಟ್ರ ಪ್ರಶಸ್ತಿಯನ್ನು ಪಡೆದ ಅಂಧಾಧುನ್ ಚಿತ್ರದ ಬರಹಗಾರ ಕೂಡ ಹೌದು.