Current Date 01 Aug, 2026

ಭೈರತಿ ರಣಗಲ್' ಅವತಾರವೆತ್ತಿ ನರ್ತಕಿಗೆ ಬಂದ ಡಾಲಿ; ಬ್ಲ್ಯಾಕ್ ಅಂಡ್ ಬ್ಲ್ಯಾಕ್‌ನಲ್ಲಿ ಮಿಂಚಿದ 'ನಟರಾಕ್ಷಸ'

ರಾಜವಂಶದ ಅಭಿಮಾನಿಗಳಿಗೆ ಇವತ್ತು ಹಬ್ಬವೋ ಹಬ್ಬ. ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ನಟನೆಯ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಭೈರತಿ ರಣಗಲ್' ಸಿನಿಮಾ ಇಂದು (ನವೆಂಬರ್ 14) ಥಿಯೇಟರ್‌ಗೆ ಲಗ್ಗೆ ಇಟ್ಟಿದೆ. ಬೆಳ್ಳಂಬೆಳಗ್ಗೆಯಿಂದಾನೇ ರಾಜ್ ಕುಟುಂಬದ ಅಭಿಮಾನಿಗಳು ಥಿಯೇಟರ್ ಮುಂದೆ ಜಮಾಯಿಸಿದ್ದಾರೆ.

'ಭೈರತಿ ರಣಗಲ್' ಸಿನಿಮಾದ ಫಸ್ಟ್ ಡೇ ಫಸ್ಟ್ ಶೋ ನೋಡಿ ಎಂಜಾಯ್ ಮಾಡಿದ್ದಾರೆ. ಶಿವಣ್ಣನ ಖದರ್‌, ಮ್ಯಾನರಿಸಂಗೆ ಮತ್ತೊಮ್ಮೆ ಫಿದಾ ಆಗಿದ್ದಾರೆ. 'ಮಫ್ತಿ' ಬಳಿಕ ಮತ್ತೆ ಶಿವಣ್ಣನನ್ನು ಅದೇ ಅವತಾರದಲ್ಲಿ ನೋಡಬೇಕು ಅಂತಿದ್ದ ಫ್ಯಾನ್ಸ್‌ ಕಾಲುಗಳಂತೂ ಇಂದು ಭೂಮಿ ಮೇಲೆ ನಿಲ್ಲುತ್ತಿಲ್ಲ. ಥಿಯೇಟರ್ ಒಳಗೆ ಚಾವಣೆನೇ ಕಿತ್ತು ಹೋಗುವ ಹಾಗೆ ಶಿವಣ್ಣನಿಗೆ ಶಿಳ್ಳೆಗಳನ್ನು ಹಾಕುತ್ತಿದ್ದಾರೆ.