Current Date 29 Jul, 2026

ಉಪ್ಪಿ ಡೈರೆಕ್ಷನ್ ಈ ದಿಗ್ಗಜರೇ ಫ್ಯಾನ್ಸ್; ಶಂಕರ್, ಪ್ರಶಾಂತ್ ನೀಲ್, ರಕ್ಷಿತ್, ಆರ್‌ಜಿವಿ ಏನು ಹೇಳಿದ್ದಾರೆ ಗೊತ್ತೇ?

ರಿಯಲ್‌ಸ್ಟಾರ್ ಉಪೇಂದ್ರ 10 ವರ್ಷಗಳ ಬಳಿಕ ನಿರ್ದೇಶಿಸಿರುವ 'ಯುಐ' ಸಿನಿಮಾ ಬಿಡುಗಡೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇದೆ. ಉಪೇಂದ್ರ ಎಲ್ಲಾ ಸಿನಿಮಾ ಪ್ರಚಾರ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ. ವರ್ಷದ ಕೊನೆಯಲ್ಲಿ ಬಿಡುಗಡೆಯಾಗುತ್ತಿರುವ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ ಬಗ್ಗೆ ನಿರೀಕ್ಷೆ ಈಗಾಗಲೇ ದುಪ್ಪಟ್ಟಿದೆ. ಅದಕ್ಕೊಂದೇ ಕಾರಣ ಉಪೇಂದ್ರ ನಿರ್ದೇಶನ.

ಉಪೇಂದ್ರ ನಿರ್ದೇಶನ ಅಂದರೆ ಕೇವಲ ಕನ್ನಡಿಗರಿಗಷ್ಟೇ ಅಲ್ಲ. ದಕ್ಷಿಣ ಭಾರತದ ಎಲ್ಲಾ ಭಾಷೆಯ ಸಿನಿಮಾ ಪ್ರೇಮಿಗಳಿಗೂ ಏನೋ ಒಂದು ಕುತೂಹಲ. ಉಪ್ಪಿ ಸಿನಿಮಾ ರಿಲೀಸ್ ಆದಾಗಲೆಲ್ಲ ತೆಲುಗಿಗೆ ಡಬ್ ಆಗಿ ರಿಲೀಸ್ ಆಗುತ್ತಿತ್ತು. ಆದರೆ, 'ಕಬ್ಜ' ಬಳಿಕ ಪ್ಯಾನ್ ಇಂಡಿಯಾ ರಿಲೀಸ್ ಆಗುತ್ತಿದೆ. 'ಯುಐ' ಐದು ಭಾಷೆಗಳಲ್ಲಿ ರಿಲೀಸ್ ಆಗುತ್ತಿದ್ದು, ಪ್ರಚಾರ ಭರ್ಜರಿಯಾಗಿ ನಡೆಯುತ್ತಿದೆ.