Current Date 26 Aug, 2026

ಏಳುಮಲೆಯ ಮಡಿಲಲ್ಲಿ ಎದೆ ನಡುಗಿಸಿದ ಪ್ರೇಮಕಥೆ"; 'ಕಾಟೇರ' ಬಳಿಕ ತರುಣ್ ಸುಧೀರ್ ಹೊಸ ಸಿನಿಮಾ ಘೋಷಣೆ!

'ಕಾಟೇರ' ಸಿನಿಮಾ ಬಳಿಕ ಮದುವೆ ಸಂಭ್ರಮದಲ್ಲಿದ್ದ ತುರುಣ್ ಸುಧೀರ್ ಮತ್ತೆ ಸಿನಿಮಾ ಕೆಲಸಕ್ಕೆ ಮರಳಿದ್ದಾರೆ. 'ಕಾಟೇರ' ಸಿನಿಮಾ ಬಳಿಕ ದರ್ಶನ್‌ಗಾಗಿ ಮತ್ತೊಂದು ಸಿನಿಮಾ ಮಾಡುವ ತಯಾರಿಯಲ್ಲಿ ಇದ್ದರು. ಈ ಮಧ್ಯೆ ಹೊಸ ಸಿನಿಮಾವನ್ನು ತರುಣ್ ಸುಧೀರ್ ಘೋಷಣೆ ಮಾಡಿದ್ದಾರೆ. ವಿವಾಹ ಬಳಿಕ ಅನೌನ್ಸ್ ಮಾಡಿದ ಮೊದಲ ಸಿನಿಮಾವಿದು. ಜಸ್ಟ್ ಸಿನಿಮಾ ಘೋಷಣೆ ಮಾಡಿ ಸಿನಿಪ್ರಿಯರ ಕುತೂಹಲವನ್ನು ಹೆಚ್ಚಿಸಿದ್ದಾರೆ.

ತಮ್ಮ ಸಿನಿಮಾದ ಪೋಸ್ಟರ್ ಅನ್ನು ರಿಲೀಸ್ ಮಾಡಿದ್ದು, "ಏಳುಮಲೆಯ ಮಡಿಲಲ್ಲಿ ಎದೆ ನಡುಗಿಸಿದ ಪ್ರೇಮಕಥೆ" ಎಂದು ಕ್ಯಾಪ್ಟನ್ ಕೊಟ್ಟಿದ್ದಾರೆ. ಹಾಗಂತ ತರುಣ್ ಸುಧೀರ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿಲ್ಲ. ಇನ್ನೂ ಟೈಟಲ್‌ ಅನೌನ್ಸ್ ಮಾಡದ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇವರೊಂದಿಗೆ 'ಕಾಟೇರ' ಸಿನಿಮಾದಲ್ಲಿ ಸಹಾಯಕರಾಗಿ ಕೆಲಸ ಮಾಡಿದ್ದ ಪುನೀತ್ ರಂಗಸ್ವಾಮಿ ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.