Current Date 31 Jul, 2026

ದರ್ಶನ್‌ ಚಿಕಿತ್ಸೆ ನೀಡದಿದ್ದರೆ ಲಕ್ವ ಹೊಡೆಯುವ ಸಾಧ್ಯತೆ; ದಾಸನಿಗಿರುವ ಆರೋಗ್ಯ ಸಮಸ್ಯೆಗಳೇನು?

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸ್ಥಾನದಲ್ಲಿರುವ ದರ್ಶನ್‌ಗೆ ಆರೋಗ್ಯ ಸಮಸ್ಯೆ ಎದುರಾಗಿದೆ. ಬಳ್ಳಾರಿ ಜೈಲಿನಲ್ಲಿರುವ ದರ್ಶನ್ ಸದ್ಯ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ ಎಂಬುದು ಗೊತ್ತಾಗಿತ್ತು. ಆದರೆ, ದಾಸನಿಗೆ ಬೆನ್ನು ನೋವಿನ ಜೊತೆಗೆ ಇನ್ನೂ ಹಲವು ಆರೋಗ್ಯ ಸಮಸ್ಯೆಗಳಿವೆ ಅನ್ನೋದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ನಿನ್ನೆ (ಅಕ್ಟೋಬರ್ 28) ದರ್ಶನ್ ಪರ ವಕೀಲರಾದ ಸಿ. ವಿ. ನಾಗೇಶ್ ಹೈಕೋರ್ಟ್ ನ್ಯಾಯಾಧೀಶರ ಮುಂದೆ ವಾದವನ್ನು ಮಂಡಿಸಿದರು. ಈ ವೇಳೆ ದರ್ಶನ್‌ಗೆ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹಾಗೇ ಅವರಿಗೆ ಇರುವ ಹಲವು ಆರೋಗ್ಯ ಸಮಸ್ಯೆಗಳನ್ನು ಬಗ್ಗೆನೂ ಹೈ ಕೋರ್ಟ್ ನ್ಯಾಯಾಧೀಶರ ಮುಂದೆ ಹೇಳಿದ್ದು, ಇಂದು (ಅಕ್ಟೋಬರ್ 29) ಜಾಮೀನು ಸಿಗುವ ಸಾಧ್ಯತೆಯಿದೆ.
ಈಗ ದರ್ಶನ್ ಜಾಮೀನಿಗಿಂತ ಹೆಚ್ಚಾಗಿ ಅವರ ಆರೋಗ್ಯ ಸಮಸ್ಯೆ ಬಗ್ಗೆ ಚರ್ಚೆಯಾಗುತ್ತಿದೆ. ದಾಸನ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಹಿರಿಯ ವಕೀಲರಾದ ಸಿ.ವಿ ನಾಗೇಶ್ ವಾದ ಮಂಡನೆ ವೇಳೆ ದರ್ಶನ್ ಬೆನ್ನು ನೋವಿನಿಂದ ಬಳಲುತ್ತಿದ್ದು, ಅವರಿಗೆ ಶೀಘ್ರವೇ ಚಿಕಿತ್ಸೆ ಆಗಬೇಕಿದೆ. ಒಂದು ವೇಳೆ ಚಿಕಿತ್ಸೆ ಆಗದೇ ಹೋದರೆ, ಪಾರ್ಶ್ವವಾಯುವಿಗೆ (ಲಕ್ವ) ತುತ್ತಾಗುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ. ಹಾಗಿದ್ದರೆ, ದಾಸನಿಗೆ ಇರುವ ಆರೋಗ್ಯ ಸಮಸ್ಯೆಗಳೇನು? ತಿಳಿಯಲು ಮುಂದೆ ಓದಿ..