Current Date 28 Sep, 2026

ರಾಮಾಯಣ'ದ 'ರಾವಣ' ನಾನೇ ಎಂದು ಗಹಗಹಿಸಿದ ಯಶ್, ಬಾಲಿವುಡ್ ಚಿತ್ರ ಒಪ್ಪಿಕೊಂಡಿದ್ದೇಕೆ..?

'ಮೊಗ್ಗಿನ ಮನಸು' ಚಿತ್ರದ ಮೂಲಕ ಕನ್ನಡಿಗರ ಹೃದಯ ಗೆದ್ದು, 'ಕೆ.ಜಿ.ಎಫ್' ಚಿತ್ರದ ಮೂಲಕ ಭಾರತದ ಅಸಂಖ್ಯಾತ ಜನರನ್ನು ಬೆರಗಾಗಿಸಿದವರು ಯಶ್. ಇಂಥಾ ಯಶ್ ಈಗ ಕೇವಲ ರಾಕಿಂಗ್ ಸ್ಟಾರ್ ಅಲ್ಲ ಬದಲಿಗೆ ನ್ಯಾಷನಲ್ ಸ್ಟಾರ್. ಗೊತ್ತಿಲ್ಲ, ಮುಂದೊಂದು ದಿನ ಇಂಟರ್ ನ್ಯಾಷನಲ್ ಸ್ಟಾರ್ ಆದರೂ ಆಗಬಹುದು. ಯಾಕೆಂದರೆ ಯಶ್ ಯೋಚನೆ-ಯೋಜನೆ ಎರಡು ದೊಡ್ಡದು. ಇದಕ್ಕೆ ಯಶ್ ಇತ್ತೀಚೆಗೆ ನೀಡಿರುವ ಸಂದರ್ಶನವೇ ಕೈಗನ್ನಡಿ. ಹೌದು, 'ಹಾಲಿವುಡ್‌'ಗೆ ಗಾಳಿ ಹಾಕಿರುವ ಯಶ್ 'ದಿ ಹಾಲಿವುಡ್‌ ರಿಪೋರ್ಟರ್ ಇಂಡಿಯಾ' ಮ್ಯಾಗಜೀನ್‌ನ ಫೋಟೋಶೂಟ್‌ಗಾಗಿ ಕ್ಯಾಮರಾಗೆ ವೆರೈಟಿ ಫೋಸ್ ಕೊಟ್ಟಿದ್ದಾರೆ. ಈ 'ಹಾಲಿವುಡ್‌ ರಿಪೋರ್ಟರ್‌'ಗೋಸ್ಕರ ಟಾಕ್ಸಿಕ್ ಚಿತ್ರದ ಚಿತ್ರೀಕರಣಕ್ಕೆ ಬ್ರೇಕ್ ಹಾಕಿ ಟಾಕ್ಸಿಕ್ ಚಿತ್ರದ ಚಿತ್ರೀಕರಣ ನಡೆಯುತ್ತಿರುವ ಸ್ಥಳದಲ್ಲಿಯೇ ಕುಂತು ಹತ್ತು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಮಹತ್ವಾಕಾಂಕ್ಷೆಯ ರಾಮಾಯಣ ಚಿತ್ರದ ಕುರಿತು ಮಾತನಾಡಿ ರಾವಣನ ಪಾತ್ರವನ್ನು ತಾವೇ ಮಾಡುತ್ತಿರುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ.