Current Date 01 Aug, 2026

ದರ್ಶನ್‌ ನಟನೆಯ ಮತ್ತೊಂದು ಚಿತ್ರ ರೀ-ರಿಲೀಸ್; ಅಭಿಮಾನಿಗಳ ಉತ್ಸಾಹ ಕಮ್ಮಿ ಆಯ್ತಾ?

ನಟ ದರ್ಶನ್ 6 ವಾರಗಳ ಕಾಲ ಮಧ್ಯಂತರ ಜಾಮೀನು ಪಡೆದು ಜೈಲಿನಿಂದ ಹೊರ ಬಂದಿದ್ದಾರೆ. ಇತ್ತೀಚೆಗೆ ದಿನಕರ್ ತೂಗುದೀಪ ನಿರ್ದೇಶನದ 'ನವಗ್ರಹ' ಸಿನಿಮಾ ಮರು ಬಿಡುಗಡೆ ಆಗಿತ್ತು. ಭರ್ಜರಿ ರೆಸ್ಪಾನ್ಸ್ ಸಹ ಸಿಕ್ಕಿತ್ತು. ಆದರೆ ಈ ವಾರ ಮತ್ತೊಂದು ಸಿನಿಮಾ ರೀ-ರಿಲೀಸ್ ಆಗ್ತಿದೆ. ಆದರೆ ಅಭಿಮಾನಿಗಳ ಉತ್ಸಾಹ ಕಡಿಮೆ ಆದಂತೆ ಕಾಣುತ್ತಿದೆ.ದರ್ಶನ್ ನಟಿಸಿದ ಯಾವುದೇ ಸಿನಿಮಾ ತೆರೆಗೆ ಬಂದರೂ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟುತ್ತದೆ. ಆದರೆ ಬ್ಯಾಕ್ ಟು ಬ್ಯಾಕ್ ಹಳೇ ಚಿತ್ರಗಳು ಬಿಡುಗಡೆ ಆಗುತ್ತಲೇ ಇದೆ. 15 ದಿನಗಳ ಅಂತರದಲ್ಲಿ ಮತ್ತೊಂದು ಸಿನಿಮಾ ಬರ್ತಿದೆ. ಹಾಗಾಗಿ ಸಹಜವಾಗಿಯೇ ಅಭಿಮಾನಿಗಳು ಸೈಲೆಂಟ್ ಆಗಿದ್ದಾರೆ.