Current Date 29 Jul, 2026

ಎರಡು ಹೊಸ ಕನ್ನಡ ಚಿತ್ರಗಳು ಓಟಿಟಿಗೆ ಬಂತು; ವೀಕೆಂಡ್ ಮನೆಯಲ್ಲೇ ಸಿನಿಮಾ ನೋಡಿ

ಈ ವಾರ ಕನ್ನಡದ ಯಾವುದೇ ದೊಡ್ಡ ಸಿನಿಮಾ ತೆರೆಗೆ ಬರ್ತಿಲ್ಲ. ತೆಲುಗಿನ 'ಪುಷ್ಪ'-2 ಸಿನಿಮಾ ಕನ್ನಡಕ್ಕೆ ಡಬ್ ಆಗಿ ಬಂದಿದೆ. ಡಬ್ಬಿಂಗ್ ಗುಣಮಟ್ಟ ಚೆನ್ನಾಗಿರುವುದರಿಂದ ಕನ್ನಡದಲ್ಲೇ ಸಿನಿಮಾ ನೋಡಬಹುದು. ಇನ್ನುಳಿದಂತೆ ಈ ವಾರ ಓಟಿಟಿಗೆ ಎರಡು ಕನ್ನಡ ಚಿತ್ರಗಳು ಬಂದಿವೆ.

ಕನ್ನಡ ಸಿನಿಮಾ ಹಾಗೂ ವೆಬ್‌ ಸೀರಿಸ್‌ಗಳು ಓಟಿಟಿಗೆ ಬರೋದು ಕಷ್ಟ ಎನ್ನುವಂತಾಗಿದೆ. ಇತ್ತೀಚೆಗೆ 'ಬಘೀರ' ಹಾಗೂ 'ಮಾರ್ಟಿನ್' ಚಿತ್ರಗಳು ಆ ಬರ ನೀಗಿಸಿದ್ದವು. ಎರಡೂ ಚಿತ್ರಗಳಿಗೆ ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ. ತೆಲುಗಿನ 'ಲಕ್ಕಿ ಭಾಸ್ಕರ್' ಸಿನಿಮಾ ಕನ್ನಡಕ್ಕೆ ಡಬ್ ಆಗಿ ಕಳೆದ ವಾರ ಸ್ಟ್ರೀಮಿಂಗ್ ಆಗಿತ್ತು. ಆ ಚಿತ್ರಕ್ಕೂ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು.