Current Date 25 Aug, 2026

ಗೌಳಿ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಹೊಸ ಭರವಸೆ ! ಫೆಬ್ರವರಿ-24 ರಂದು ಗೌಳಿ ಸಿನಿಮಾ ಎಲ್ಲೆಡೆ ರಿಲೀಸ್ ಆಗುತ್ತಿದೆ

ಗೌಳಿ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ನಿಮಗೆ ಗುರುತು ಸಿಗೋದಿಲ್ಲ. ಗೌಳಿ ಪಾತ್ರದಲ್ಲಿ ಅಷ್ಟೊಂದು ತಲ್ಲೀನತೆಯಿಂದಲೇ ಅಭಿನಯಿಸಿದ್ದಾರೆ. ಗೌಳಿ ಚಿತ್ರದ ಟ್ರೈಲರ್ ನೋಡಿದಾಕ್ಷಣ ಮನ ಕಲುಕುವ ದೃಶ್ಯಗಳು ನಿಮ್ಮಲ್ಲಿ ಏನೋ ಒಂದು ಭಾವನೆ ಮೂಡಿಸುತ್ತವೆ.

ಡೈರೆಕ್ಟರ್ ಸೂರಾ ಈ ಮೂಲಕ ಸತ್ಯ ಘಟನೆಯನ್ನ ಆಧರಿಸಿಯೇ ಗೌಳಿ ಸಿನಿಮಾ ಮಾಡಿದ್ದಾರೆ. ಗ್ಲಾಮರಸ್ ನಟಿ ಪಾವನಾ ಕೂಡ ಇಲ್ಲಿ ಡಿ ಗ್ಲಾಮರ್ ರೋಲ್​ನಲ್ಲಿಯೇ ಕಾಣಿಸಿಕೊಂಡಿದ್ದಾರೆ. ಶ್ರೀನಗರ ಕಿಟ್ಟಿ ಅವರಂತೂ ನೈಜವಾಗಿಯೇ ಅಭಿನಯಿಸಿದ್ದಾರೆ ಅಂತಲೇ ಹೇಳಬಹುದು.

ಗೌಳಿ ಚಿತ್ರಕ್ಕೆ ಗಾಯಕ ಶಶಾಂಕ್ ಶೇಷಗಿರಿ ಸಂಗೀತ ಕೊಟ್ಟಿದ್ದಾರೆ. ಒಳ್ಳೆ ಸಂಗೀತದ ನಿರೀಕ್ಷೆಯನ್ನೂ ನಾವು ಮಾಡಬಹುದು. ಇನ್ನು ಫೆಬ್ರವರಿ-24 ರಂದು ಗೌಳಿ ಸಿನಿಮಾ ಎಲ್ಲೆಡೆ ರಿಲೀಸ್ ಆಗುತ್ತಿದೆ.