Current Date 01 Aug, 2026

ಶಿವಣ್ಣನಿಗೆ ಶಿವರಾಜ್‌ಕುಮಾರ್ ಅಂತ ಹೆಸರಿಡುವಂತೆ ಸೂಚಿಸಿದ್ದು ಯಾರು? ಹುಟ್ಟಿದ ಹೆಸರು ಬದಲಿಸಿದ್ದೇಕೆ?

ಸ್ಯಾಂಡಲ್‌ವುಡ್‌ನಲ್ಲಿ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಖದರ್ ಬೇರೆನೇ ಇದೆ. ಎನರ್ಜಿಗೆ ಇನ್ನೊಂದು ಹೆಸರೇ ಶಿವಣ್ಣ ಅನ್ನೋದು ಹೊಸ ವಿಷಯವೇನೂ ಅಲ್ಲ. ಕೆಲವು ಪಾತ್ರಗಳನ್ನು ಇವರು ಬಿಟ್ಟರೆ ಬೇರೆ ಯಾರೂ ಮಾಡುವುದಕ್ಕೆ ಸಾಧ್ಯವೇ ಇಲ್ಲವೇನೋ ಅನ್ನುವಷ್ಟು ಪವರ್‌ಫುಲ್ ಆಗಿರುತ್ತೆ. ಅದಕ್ಕೆ ಇಂದಿಗೂ ಅಭಿಮಾನಿಗಳು ದೊಡ್ಡ ಸಾಮ್ರಾಜ್ಯವನ್ನೇ ಕಟ್ಟಿ ಶಿವಣ್ಣನನ್ನು ಮೆರೆಸುತ್ತಿದ್ದಾರೆ.

ಶಿವಣ್ಣ ನಟಿಸದ ಸಿನಿಮಾಗಳೇ ಇಲ್ಲ. ಎಂತಹದ್ದೇ ಪಾತ್ರವಿದ್ದರೂ ಎಲ್ಲದಕ್ಕೂ ಜೈ. ಲವ್ ಸ್ಟೋರಿ, ರೊಮ್ಯಾಂಟಿಕ್ ಸಿನಿಮಾಗಳು, ಕಾಮಿಡಿ, ಆಕ್ಷನ್, ಅಂಡರ್‌ವರ್ಲ್ಡ್ ಪ್ರಕಾರದ ಸಿನಿಮಾಗಳನ್ನು ಸಲೀಸಾಗಿ ಮಾಡಿಬಿಡಬಲ್ಲ ನಟ. ವರ್ಷಕ್ಕೆ ಕಮ್ಮಿ ಅಂದರೂ ಎರಡೆರಡು ಸಿನಿಮಾಗಳನ್ನು ಅಭಿಮಾನಿಗಳಿಗೆ ಕೊಡುವ ಏಕೈಕ ನಟ ಅಂದರೆ, ಅದು ಶಿವರಾಜ್‌ಕುಮಾರ್.