Current Date 26 Aug, 2026

ಮತ್ತೆ ಬರ್ತಿದ್ದಾನೆ 'ಅಯೋಗ್ಯ'; ರಚ್ಚುಗೆ ಹೊಸ ಬಿರುದು ಕೊಟ್ಟ ಟೀಂ

ಕನ್ನಡದಲ್ಲಿ 6 ವರ್ಷಗಳ ಹಿಂದೆ ಬಂದಿದ್ದ 'ಅಯೋಗ್ಯ' ಸಿನಿಮಾ ಸೂಪರ್ ಹಿಟ್ ಆಗಿತ್ತು. ನೀನಾಸಂ ಸತೀಶ್ ಜೋಡಿಯಾಗಿ ರಚಿತಾ ರಾಮ್ ಮಿಂಚಿದ್ದರು. ಹಾಸ್ಯದ ಲೇಪನದೊಂದಿಗೆ ಒಂದು ಹಳ್ಳಿ ಸೊಗಡಿನ ಲವ್‌ಸ್ಟೋರಿಯನ್ನು ಚಿತ್ರದಲ್ಲಿ ಕಟ್ಟಿಕೊಡಲಾಗಿತ್ತು. ಬಹಳ ದಿನಗಳಿಂದ ಚಿತ್ರದ ಸೀಕ್ವೆಲ್ ಬಗ್ಗೆ ಚರ್ಚೆ ನಡೀತಿತ್ತು.

ಇದೀಗ ನಿರ್ದೇಶಕ ಮಹೇಶ್ ಕುಮಾರ್ ಮತ್ತೆ 'ಅಯೋಗ್ಯ'ನನ್ನು ಕರೆ ತರುತ್ತಿದ್ದಾರೆ. ಅರ್ಥಾತ್ ಚಿತ್ರದ ಸೀಕ್ವೆಲ್ ಖಚಿತವಾಗಿದೆ. ಸ್ಪೆಷಲ್ ವೀಡಿಯೋ ಮೂಲಕ ಚಿತ್ರತಂಡ ಈ ವಿಚಾರವನ್ನು ಹಂಚಿಕೊಂಡಿದೆ. ಚಿತ್ರಕ್ಕೆ ಮೂವರು ಸಹಿ ಮಾಡಿರುವ ಸ್ಪೆಷಲ್ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ. ಡಿಸೆಂಬರ್ 11ಕ್ಕೆ ಸಿನಿಮಾ ಚಿತ್ರೀಕರಣ ಆರಂಭವಾಗಲಿದೆ.