Current Date 01 Aug, 2026

ಯಾವ ಹೀರೋಗಳು ಹಾಡಿನ ವಿಷಯಕ್ಕೆ ನನ್ನ ಜೊತೆ ಕೂತು ಮಾತಾಡಿರುವ ಚರಿತ್ರೆನೇ ಇಲ್ಲ"; ಡಾ. ನಾಗೇಂದ್ರ ಪ್ರಸಾದ್

ಸ್ಯಾಂಡಲ್‌ವುಡ್‌ನಲ್ಲಿ ಬಹುಬೇಡಿಕೆಯ ಸಿನಿ ಸಾಹಿತಿಗಳಲ್ಲಿ ಡಾ.ನಾಗೇಂದ್ರ ಪ್ರಸಾದ್ ಕೂಡ ಒಬ್ಬರು. ಬಿಡುವಿಲ್ಲದೆ ಒಂದಾದ ಮೇಲೊಂದರಂತೆ ಸೂಪರ್ ಹಿಟ್ ಹಾಡುಗಳನ್ನು ಬರೆಯುತ್ತಲೇ ಇದ್ದಾರೆ. ಇತ್ತೀಚೆಗೆ ತೆರೆಕಂಡ 'ಕೃಷ್ಣ ಪ್ರಣಯ ಸಖಿ'ಯ ಸೂಪರ್‌ ಹಿಟ್ ಸಾಂಗ್ "ದ್ವಾಪರ.." ಹಾಡಿಗೆ ಸಾಹಿತ್ಯ ಬರೆದಿದ್ದು ಕೂಡ ಅವರೇ. ಇಂತಹ ಸಾವಿರಾರು ಸೂಪರ್‌ಹಿಟ್ ಸಾಂಗ್‌ಗಳನ್ನು ನಾಗೇಂದ್ರ ಪ್ರಸಾದ್ ಬರೆದಿದ್ದಾರೆ. ಕನ್ನಡ ಸಿನಿಮಾರಂಗದಲ್ಲಿರುವ ಕೆಲವೇ ಬಹುಬೇಡಿಕೆಯ ಸಾಹಿತಿಗಳಿದ್ದಾರೆ. ಹಂಸಲೇಖ ಬಳಿಕ ಸಾಹಿತ್ಯ ಕ್ಷೇತ್ರದಲ್ಲಿ ಅತೀ ಹೆಚ್ಚು ಹಾಡುಗಳಿಗೆ ಸಾಹಿತ್ಯ ರಚಿಸಿದವರ ಪೈಕಿ ನಾಗೇಂದ್ರ ಪ್ರಸಾದ್ ಕೂಡ ಸೇರಿಕೊಳ್ಳುತ್ತಾರೆ. ಕನ್ನಡದ ಸೂಪರ್‌ಸ್ಟಾರ್‌ಗಳಿಗೆ ಮಾಸ್ ಇಂಟ್ರುಡಕ್ಷನ್ ಸಾಂಗ್ ಬೇಕು ಅಂದರೆ, ನಿರ್ದೇಶಕರ ಮೊದಲ ಆಯ್ಕೆ ಡಾ.ನಾಗೇಂದ್ರ ಪ್ರಸಾದ್.

ದರ್ಶನ್, ಕಿಚ್ಚ ಸುದೀಪ್, ಪುನೀತ್ ರಾಜ್‌ಕುಮಾರ್ ಸೇರಿದಂತೆ ಕನ್ನಡದ ಸೂಪರ್‌ಸ್ಟಾರ್‌ಗಳಿಗೆ ನಾಗೇಂದ್ರ ಪ್ರಸಾದ್ ಅವರು ಮಾಸ್ ಇಂಟ್ರುಡಕ್ಷನ್ ಸಾಂಗ್ ಅನ್ನು ಬರೆದಿದ್ದಾರೆ. ಹಾಗಿದ್ದರೆ, ನಾಗೇಂದ್ರ ಪ್ರಸಾದ್ ಹೀರೋಗಳಿಗೆ ಹಾಡುಗಳನ್ನು ಬರೆಯುವಾಗ ಸೂಪರ್‌ಸ್ಟಾರ್‌ಗಳು ಜೊತೆಯಲ್ಲಿ ಇರುತ್ತಾರಾ? ಅವರು ಹೇಳಿದಂತೆ ಸಾಹಿತ್ಯ ರಚಿಸುತ್ತಾರಾ? ಸಾಹಿತ್ಯವನ್ನು ಹೇಗೆ ರಚಿಸುತ್ತಾರೆ? ಈ ಎಲ್ಲಾ ಪ್ರಶ್ನೆಗಳಿಗೆ ಸ್ವತ: ನಾಗೇಂದ್ರ ಪ್ರಸಾದ್ ಫಿಲ್ಮಿಬೀಟ್ ಕನ್ನಡ ಜೊತೆಗಿನ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ. ಅದೇನು ಅನ್ನೋದನ್ನು ತಿಳಿಯಲು ಮುಂದೆ ಓದಿ.