Current Date 23 Sep, 2026

"ಪ್ಯಾನ್ ಇಂಡಿಯಾ ಅಂತ ಹೋದ್ರೆ, ಬಾಡಿ, ದಾಡಿ ಬೆಳೆಯುತ್ತೆ ಅಷ್ಟೇ"; ಯಶ್‌ಗೆ ಟಾಂಗ್ ಕೊಟ್ರಾ ಹಂಸಲೇಖ?

ಪ್ಯಾನ್ ಇಂಡಿಯಾ ಸಿನಿಮಾ ಬೆನ್ನುಬಿದ್ದಿರೋ ಕನ್ನಡ ಚಿತ್ರರಂಗಕ್ಕೆ ವಕ್ರದೃಷ್ಟಿ ಬಿದ್ದಿದೆ. ಯುವ ಪ್ರತಿಭೆಗಳ ಸಿನಿಮಾಗಳು, ಸ್ಮಾಲ್ ಬಜೆಟ್ ಸಿನಿಮಾಗಳನ್ನು ನೋಡುವುದಕ್ಕೆ ಪ್ರೇಕ್ಷಕರು ಆಸಕ್ತಿ ತೋರುತ್ತಿಲ್ಲ. ಕಳೆದ ಒಂದೂವರೆ ಎರಡು ವರ್ಷಗಳಿಂದ ಸ್ಯಾಂಡಲ್‌ವುಡ್‌ನ ಪರಿಸ್ಥಿತಿ ಸಿಕ್ಕಾಪಟ್ಟೆ ಶೋಚನೀಯವಾಗಿದೆ.

ಕನ್ನಡದ ಸೂಪರ್‌ಸ್ಟಾರ್‌ಗಳು ಪ್ಯಾನ್ ಇಂಡಿಯಾ ಸಕ್ಸಸ್ ಕಂಡ ಮೇಲೆ ಅಂತಹದ್ದೇ ಸಿನಿಮಾ ಮಾಡುವುದಕ್ಕೆ ಆಸಕ್ತಿ ತೋರುತ್ತಿದ್ದಾರೆ. ಇಡೀ ಭಾರತಕ್ಕೂ ಸಲ್ಲುವ ಸಿನಿಮಾಗಳನ್ನು ಮಾಡುವುದರ ಕಡೆಗೆ ಗಮನ ಹರಿಸುತ್ತಿದ್ದಾರೆ. ಪ್ಯಾನ್ ಇಂಡಿಯಾ ಮಾಡುವ ಭರಾಟೆಯಲ್ಲಿ ಕನ್ನಡದ ಬೇರನ್ನೇ ಮರೆಯುತ್ತಿದ್ದಾರೆ ಅನ್ನೋ ಆರೋಪ ಬಹಳ ದಿನಗಳಿಂದಲೂ ಕೇಳಿ ಬರುತ್ತಿದೆ.