ಸತತ ಸೋಲು ಮತ್ತು ವಿವಾದಗಳಿಂದ ಹೈರಾಣಾದ ಕನ್ನಡ ಚಿತ್ರರಂಗದಲ್ಲಿ ಈಗೀಗ ಭರವಸೆ ಮೂಡಿಸುವ ಕೆಲಸಗಳು ನಡೆಯುತ್ತಿವೆ. ಹಾಡು-ಟ್ರೇಲರ್- ಮೇಕಿಂಗ್ ಹೀಗೆ ಒಂದಿಲ್ಲೊಂದು ಕಾರಣಗಳಿಂದ ಕೆಲ ಸಿನಿಮಾ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗುತ್ತಿವೆ. ಉದಾಹರಣೆಗೆ ಭೀಮ.
ಹೌದು. ದುನಿಯಾ ವಿಜಯ್ ನಿರ್ದೇಶಿಸಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಭೀಮ ಈ ಆಗಸ್ಟ್ 09ರಂದು ಬಿಡುಗಡೆಯಾಗಲಿದೆ. ಆರಂಭದಿಂದಲೂ ಕುತೂಹಲ ಕೆರಳಿಸಿರುವ ಈ ಚಿತ್ರದ ಹಾಡುಗಳೆಲ್ಲವೂ ಮಾಸ್ ಪ್ರೇಕ್ಷಕರ ಬಾಯಲ್ಲಿ ನಲಿಯುತ್ತಿವೆ. ಇನ್ನೂ ಮೊನ್ನೆಯಷ್ಟೇ ಬಿಡುಗಡೆಯಾದ ಟ್ರೇಲರ್ ಚಿತ್ರದ ಮೇಲಿನ ನಿರೀಕ್ಷೆಯನ್ನೂ ಹೆಚ್ಚಿಸಿದೆ. ಯೂಟ್ಯೂಬ್ ಸೇರಿ ಸಾಮಾಜಿಕ ಜಾಲತಾಣಗಳಲ್ಲಿ 'ಭೀಮ'ನ ಟ್ರೇಲರ್ ಎಲ್ಲರ ಚಿತ್ತವನ್ನೂ ಕದಿಯುತ್ತಿದೆ.