Current Date 01 Aug, 2026

ಕರ್ನಾಟಕದಲ್ಲೇ 'ಭೈರತಿ ರಣಗಲ್'ಗೆ ತಮಿಳು 'ಕಂಗುವ' ಸವಾಲು

ಕರ್ನಾಟಕದಲ್ಲಿ ಪರಭಾಷಾ ಸಿನಿಮಾಗಳ ಹಾವಳಿ ಹೊಸದೇನು ಅಲ್ಲ. ತೆಲುಗು, ತಮಿಳಿನ ಸ್ಟಾರ್‌ ನಟರ ಚಿತ್ರಗಳು ದೊಡ್ಡಮಟ್ಟದಲ್ಲೇ ಇಲ್ಲಿ ತೆರೆಗಪ್ಪಳಿಸುತ್ತವೆ. ಆದರೆ ಕೆಲವೊಮ್ಮೆ ಕನ್ನಡ ಸಿನಿಮಾಗಳನ್ನು ಮೀರಿಸಿ ಸ್ಕ್ರೀನ್‌ಗಳನ್ನು ಪಡೆದುಕೊಳ್ಳುತ್ತವೆ. ಈ ವಾರ ಕನ್ನಡದ 'ಭೈರತಿ ರಣಗಲ್' ಜೊತೆ ತಮಿಳಿನ 'ಕಂಗುವ' ಸಿನಿಮಾ ತೆರೆಗೆ ಬರಲಿದೆ.

ಶಿವ ನಿರ್ದೇಶನದಲ್ಲಿ ಸೂರ್ಯ ನಟನೆಯ 'ಕಂಗುವ' ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿದೆ. ಗುರುವಾರವೇ(ನವೆಂಬರ್ 14) ಕಂಗುವ ಆರ್ಭಟ ಶುರುವಾಗಲಿದೆ. ಶಿವರಾಜ್‌ಕುಮಾರ್ ನಟನೆಯ 'ಭೈರತಿ ರಣಗಲ್' ಶುಕ್ರವಾರ ಪ್ರೇಕ್ಷಕರ ಮುಂದೆ ಬರಲಿದೆ. ಈಗಾಗಲೇ 'ಕಂಗುವ' ಅಡ್ವಾನ್ಸ್ ಬುಕ್ಕಿಂಗ್ ಸಹ ಶುರುವಾಗಿದೆ.