Current Date 30 Jul, 2026

"ಅಮ್ಮನ ಪಕ್ಕ ಕೂತಿದ್ದೀನಿ ಎಪಿ ಅರ್ಜುನ್ ಅರೆಸ್ಟ್ ಅಂತ ಬರ್ತಿದ್ರೆ ಹೆಂಗಾಗ್ಬೇಕು ನನಗೆ" ; ಮಾರ್ಟಿನ್ ಡೈರೆಕ್ಟರ್ ಕಿಡಿ


ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ 'ಮಾರ್ಟಿನ್' ರಿಲೀಸ್‌ಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಧ್ರುವ ಸರ್ಜಾ ಲೀಡ್‌ ರೋಲ್‌ನಲ್ಲಿ ನಟಿಸಿರುವ ಈ ಸಿನಿಮಾ ಸುತ್ತ ವಿವಾದಗಳು ಹುಟ್ಟಿಕೊಂಡಿವೆ. ನಿರ್ದೇಶಕ ಎಪಿ ಅರ್ಜುನ್ 50 ಲಕ್ಷ ರೂಪಾಯಿ ಕಮಿಷನ್ ತೆಗೆದುಕೊಂಡಿದ್ದಾರೆ ಅನ್ನೋದು ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು. ಈ ಸಂಬಂಧ ಎಪಿ ಅರ್ಜುನ್ ಪತ್ರಿಕಾಗೋಷ್ಠಿ ಮಾಡಿ ಸ್ಪಷನೆ ಕೊಟ್ಟಿದ್ದಾರೆ.

ಆ ವೇಳೆ 'ಮಾರ್ಟಿನ್' ಸಿನಿಮಾ ತಂಡವಿರಲಿಲ್ಲ. ಈ ಸಂಬಂಧ ಮತ್ತೆ ಮಾರ್ಟಿನ್ ತಂಡ ಪತ್ರಿಕಾ ಗೋಷ್ಠಿಯನ್ನು ಕರೆದಿತ್ತು. ಅದರಲ್ಲಿ ನಿರ್ಮಾಪಕ ಉದಯ್ ಮೆಹ್ತಾ, ಧ್ರುವ ಸರ್ಜಾ, ನಿರ್ದೇಶಕ ಎಪಿ ಅರ್ಜುನ್ ಭಾಗಿಯಾಗಿದ್ದರು. ಈ ವೇಳೆ ಮತ್ತೆ ಎಪಿ ಅರ್ಜುನ್ ವಿವಾದಕ್ಕೆ ಸ್ಪಷ್ಟನೆ ಕೊಟ್ಟಿದ್ದಾರೆ. ಜೊತೆ ಅರೆಸ್ಟ್ ಅಂತ ಪ್ರಸಾರ ಮಾಡಿದ್ದರ ಬಗ್ಗೆನೂ ಕಿಡಿಕಾರಿದ್ದಾರೆ