Current Date 30 Jul, 2026

"ಉದಯ್ ಮೆಹ್ತಾ ಎಪಿ ಅರ್ಜುನ್ ಕಿತ್ತಾಟ ಹೊಸದೇನಲ್ಲ.. ಎಲ್ಲರಿಗೂ ಈಗ ಗೊತ್ತಾಗಿದೆಯಷ್ಟೇ"; ಧ್ರುವಾ ಸರ್ಜಾ

2024, ಕನ್ನಡ ಚಿತ್ರರಂಗದ ಮಟ್ಟಿಗೆ ನಿರಾಸೆ ಮೂಡಿಸಿದ ವರ್ಷ. ಈ ವರ್ಷ ಒಂದೇ ಒಂದು ಸಿನಿಮಾ ಬಾಕ್ಸಾಫೀಸ್‌ನಲ್ಲಿ ಅದ್ಭುತ ಅನ್ನುವಂತಹ ಕಲೆಕ್ಷನ್ ಮಾಡಿಲ್ಲ. ಈ ವರ್ಷ ಕೂಡ ಹೀಗೆ ಮುಗಿದು ಹೋಗುತ್ತೆ ಅನ್ನುವ ಬೇಸರದಲ್ಲಿದ್ದ ಸಿನಿಪ್ರಿಯರ ಪಾಲಿಗೆ ಈ ವರ್ಷದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಭರವಸೆ ಮೂಡಿಸುತ್ತಿದೆ. ಅದುವೇ ಧ್ರುವ ಸರ್ಜಾ ನಟನೆಯ 'ಮಾರ್ಟಿನ್'.

ಧ್ರುವ ಸರ್ಜಾ ಹಾಗೂ ಎಪಿ ಅರ್ಜುನ್ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಮತ್ತೊಂದು ಅದ್ಧೂರಿ ಸಿನಿಮಾ. ಕಳೆದ ಮೂರೂವರೆ ವರ್ಷಗಳಿಂದ ನಿರ್ಮಾಣಗೊಂಡಿದ್ದ ಈ ಸಿನಿಮಾ ಸದ್ಯ ವಿವಾದದ ಕೇಂದ್ರ ಬಿಂದುವಾಗಿದೆ. 'ಮಾರ್ಟಿನ್' ಸಿನಿಮಾದ ನಿರ್ಮಾಪಕ ಎಪಿ ಅರ್ಜುನ್ ಕಮಿಷನ್ ತೆಗೆದುಕೊಂಡಿದ್ದಾರೆ ಅನ್ನೋ ಸಂಗತಿ ಈಗ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.