Current Date 22 Sep, 2026

ದರ್ಶನ್ ಜೈಲಿನಲ್ಲಿರುವ ಹೊತ್ತಲ್ಲಿ ಹಳೇ ಸಿನಿಮಾ ರೀ- ರಿಲೀಸ್; ರಿಪೀಟ್ ಆಗುತ್ತಾ 'ಸಾರಥಿ' ಮ್ಯಾಜಿಕ್?


ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರುವಂತಾಗಿದೆ. ಸದ್ಯ ವಿಚಾರಣಾಧೀನ ಖೈದಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಸದ್ಯಕ್ಕೆ ಬೇಲ್ ಸಿಗುವುದು ಕಷ್ಟ ಎನ್ನಲಾಗ್ತಿದೆ. ಇಂತಹ ಸಮಯದಲ್ಲೇ ದರ್ಶನ್ ನಟನೆಯ ಸೂಪರ್ ಹಿಟ್ ಸಿನಿಮಾ ರೀ ರಿಲೀಸ್‌ ಆಗುತ್ತಿದೆ

ಐಪಿಎಲ್, ಎಲೆಕ್ಷನ್ ಮುಗಿದು ತಿಂಗಳಾದರೂ ದೊಡ್ಡ ಸಿನಿಮಾಗಳು ಚಿತ್ರಮಂದಿರಕ್ಕೆ ಬರುತ್ತಿಲ್ಲ. ಹಾಗಾಗಿ ಹಳೇ ಸಿನಿಮಾಗಳನ್ನು ಮತ್ತೆ ತೆರೆಗೆ ತರುವ ಪ್ರಯತ್ನ ಮುಂದುವರೆದಿದೆ. ಈ ಹಿಂದೆ ಪುನೀತ್ ರಾಜ್‌ಕುಮಾರ್ ನಟನೆಯ 'ಜಾಕಿ' ಸಿನಿಮಾ ತೆರೆಕಂಡು ಭರ್ಜರಿ ಓಪನಿಂಗ್ ಪಡೆದುಕೊಂಡಿತ್ತು. ಬಳಿಕ ಉಪೇಂದ್ರ ನಿರ್ದೇಶಿಸಿ ನಟಿಸಿದ 'ಎ' ಸೇರಿದಂತೆ ಹಲವು ಸಿನಿಮಾಗಳು ಹೊಸ ರೂಪದಲ್ಲಿ ಪ್ರೇಕ್ಷಕರ ಮುಂದೆ ಬಂದಿದ್ದವು. ಈ ವಾರ ದರ್ಶನ್ ನಟನೆಯ 'ಶಾಸ್ತ್ರಿ' ಸಿನಿಮಾವನ್ನು ತೆರೆಗೆ ತರುವ ಪ್ರಯತ್ನ ನಡೀತಿದೆ