Current Date 24 Sep, 2026

ಚಿತ್ರರಂಗಕ್ಕೆ ತುಂಬಾ ಕಷ್ಟವಿದೆ, ಸಾವು ನೋವುಗಳಾಗಬಹುದು ಎಂದಿದ್ದ ಜ್ಯೋತಿಷಿ: ಸರ್ಪ ದೋಷಕ್ಕೆ ಮುಂದಾಗ ಕಲಾವಿದರು

ಕಳೆದ ಮೂರು ನಾಲ್ಕು ವರ್ಷಗಳಿಂದ ಕನ್ನಡ ಚಿತ್ರರಂಗ ಏಳಿಗೆಯನ್ನೇ ಕಂಡಿಲ್ಲ. ಕನ್ನಡ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಹೀನಾಯವಾಗಿ ಸೋಲುತ್ತಿವೆ. ನಿರ್ಮಾಪಕರು ನಷ್ಟ ಹಾದಿಯನ್ನು ಹಿಡಿಯುತ್ತಿದ್ದಾರೆ. ಸೋಲಿನ ಸುಳಿಗೆ ಸಿಲುಕಿ ಸಿನಿಮಾ ಮಾಡುವುದನ್ನೇ ನಿಲ್ಲಿಸುತ್ತಿದ್ದಾರೆ. ಮತ್ತೊಂದು ಕಡೆ ಥಿಯೇಟರ್‌ಗೆ ಜನರೇ ಬರುತ್ತಿಲ್ಲ ಅಂತ ಸಿಂಗಲ್‌ ಸ್ಕ್ರೀನ್‌ಗಳು ಒಂದೊಂದಾಗೇ ಮುಚ್ಚುತ್ತಿವೆ. ಸೂಪರ್‌ಸ್ಟಾರ್‌ಗಳು ವಿವಾದವನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ.