Current Date 22 Sep, 2026

"ಅಕ್ಕ ಪಕ್ಕದಲ್ಲಿ ಚೂರಿ ಸಿಗುತ್ತಾ? ಕೈ ಕತ್ತರಿಸಿಕೊಂಡು ಬಿಡೋಣ ಅಂತ ಅನಿಸಿತ್ತು"; ಸಂಜನಾ ಗಲ್ರಾನಿ


ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿ ದರ್ಶನ್ ಜೈಲು ಸೇರುತ್ತಿದ್ದಂತೆ ಮೊದಲ ಧ್ವನಿ ಎತ್ತಿದವರು ಸಂಜನಾ ಗಲ್ರಾನಿ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಪರ ನಿಂತಿದ್ದರು. ಅಲ್ಲಿಂದ ಇಲ್ಲಿವರೆಗೂ ದರ್ಶನ್ ಅವರನ್ನು ಬೆಂಬಲಿಸುತ್ತಲೇ ಬಂದಿದ್ದಾರೆ. ಇದರೊಂದಿಗೆ ತಮಗೂ ಹೀಗೆ ಅನ್ಯಾಯ ಆಗಿದೆ ಎಂದು ಅಳಲನ್ನು ತೋಡಿಕೊಂಡಿದ್ದಾರೆ.

ಸ್ಯಾಂಡಲ್‌ವುಡ್ ನಟಿ ಸಂಜನಾ ಗಲ್ರಾನಿ ಡ್ರಗ್ ಕೇಸ್‌ನಲ್ಲಿ ಜೈಲಿಗೆ ಹೋಗಿದ್ದರು. ಈ ಸುದ್ದಿ ಆ ವೇಳೆ ದೇಶಾದ್ಯಂತ ಸಿಕ್ಕಾಪಟ್ಟೆ ಸಂಚಲನವನ್ನೂ ಸೃಷ್ಟಿಸಿತ್ತು. ಸಂಜನಾ ಹಾಗೂ ರಾಗಿಣಿ ಇಬ್ಬರ ಹೆಸರು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಈಗ ಅವರಿಗೆ ಡ್ರಗ್ಸ್ ಕೇಸ್‌ನಲ್ಲಿ ಕ್ಲೀನ್ ಚಿಟ್ ಸಿಕ್ಕಿದೆ. ಈ ವೇಳೆ ಆ ದಿನದ ಕಹಿ ಘಟನೆಯನ್ನು ಫಿಲ್ಮಿಬೀಟ್ ಜೊತೆ ನೆನಪಿಸಿಕೊಂಡಿದ್ದಾರೆ.