Current Date 24 Sep, 2026

''ನಿಮ್ಮೊಂದಿಗೆ ನಿಲ್ಲುವ ಅಗತ್ಯವಿದ್ದಾಗ ನಿಮ್ಮನ್ನು ಸೋಲಿಸಿ ನಿಮಗೆ ಲೈಂಗಿಕ ಕಿರುಕುಳ ಕೊಟ್ಟವರ ಜೊತೆ ನಿಂತಿದ್ದೆವು''

ನಿನ್ನೆ ನಿಗದಿಯ ದೇಹ ತೂಕಕ್ಕಿಂತ ಕೇವಲ ನೂರು ಗ್ರಾಂ, ನೂರೇ ನೂರು ಗ್ರಾಂ ತೂಕ ಹೆಚ್ಚಾಗಿದ್ದಕ್ಕೆ ಒಲಪಿಂಕ್ಸ್‌ನಲ್ಲಿ ವಿನೇಶ್ ಫೋಗಟ್ ಅನರ್ಹವಾದ ಸುದ್ದಿ ಕೇಳಿದ ಭಾರತದ ಅಸಂಖ್ಯಾತ ಕ್ರೀಡಾ ಪ್ರೇಮಿಗಳಿಗೆ ಕಾಲಡಿಯ ನೆಲ ಕುಸಿದ ಅನುಭವವಾಗಿತ್ತು.

ಇನ್ನೂ ತಮಗೆ ಎದುರಾದ ಸವಾಲುಗಳನ್ನೆಲ್ಲ ಮೀರಿ ಫೈನಲ್ ಪ್ರವೇಶಿಸಿ, ಒಲಪಿಂಕ್ಸ್‌ನಲ್ಲಿ ಈ ಸಾಧನೆಯನ್ನು ಮಾಡಿದ ಭಾರತದ ಮೊದಲ ಮಹಿಳಾ ಕುಸ್ತಿ ಪಟು ಎಂಬ ಹೆಗ್ಗಳಿಕೆಗೆ ಪಾತ್ರವಾದ ವಿನೇಶ್ ಫೋಗಟ್ ಅವರ ಮನದ ನೋವು ಹೇಳಲು ಅಸಾಧ್ಯ. ಆ ನೋವಲ್ಲಿಯೇ ಕುಸ್ತಿಗೆ ಇಂದು ವಿದಾಯ ಹೇಳಿರುವ ವಿನೇಶ್ ಗೆ ಅನೇಕರು ಧೈರ್ಯ ತುಂಬಿದ್ದಾರೆ. ಚಿನ್ನ ಸಿಗಲಿ ಸಿಗದೇ ಇರಲಿ ನೀವು ಭಾರತದ ಚಿನ್ನ ಎಂದು ತಮ್ಮ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿನೇಶ್ ಅವರನ್ನು ಬೆಂಬಲಿಸಿ ಬರಹಗಳನ್ನೂ ಹಂಚಿಕೊಳ್ಳುತ್ತಿದ್ದಾರೆ. ಆ ಪೈಕಿ ಕವಿರಾಜ್ ಕೂಡ ಒಬ್ಬರು.