Current Date 18 Mar, 2025

ಟಿ ಸ್ಟುಡಿಯೋಸ್‌ನಿಂದ ಹೊಸ ಸಿನಿಮಾ !

ಟಿ ಸ್ಟುಡಿಯೋಸ್‌ ನ ಹೊಸ ಸಿನಿಮಾ “ಪ್ರೊಡಕ್ಷನ್ #1” ಎಂಬ ಸದ್ಯದ ಹೆಸರಿನಿಂದ ಘೋಷಣೆ ಮಾಡಿದೆ, ಇದು ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸುವ ವಿಶ್ವಾಸ ಮೂಡಿಸಿದೆ. ಈ ಸಿನಿಮಾದ ಮೊದಲ ಲುಕ್‌ ಪೋಸ್ಟರ್‌ನಲ್ಲಿ, “ಯದ್ ಭಾವಂ ತದ್ ಭವತಿ” ಎಂಬ ಉಕ್ತಿಯೊಂದಿಗೆ ಪ್ರಭಾವಶಾಲಿ ಹಾಗೂ ಶೈಕ್ಷಣಿಕ  ಸಂದೇಶವನ್ನು ನೀಡಲು ಪ್ರಯತ್ನಿಸಲಾಗಿದೆ. ಈ ಸಿನಿಮಾದಲ್ಲಿ ಅನೀಲ್ ರಾಜೇ ಅರಸ್ ನಿರ್ದೇಶನ ಮತ್ತು ಕಥನವನ್ನು ನಿಭಾಯಿಸುತ್ತಿದ್ದು, ಚಿತ್ರದ ನಿರ್ಮಾಪಕರಾಗಿ ಪ್ರತಾಪ್ ಶೆಟ್ಟಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಹ ನಿರ್ಮಾಪಕರಾಗಿ ಸುನೀಲ್ ಗುಪ್ತ ಪಾಲ್ಗೊಂಡಿದ್ದಾರೆ. 

ಈ ಹೊಸ ಪ್ರಸ್ತಾವನೆ ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಕಥಾಂದರ ಮತ್ತು ಶ್ರೇಷ್ಟ ಮಟ್ಟದ ತಾಂತ್ರಿಕ ಗುಣಮಟ್ಟವನ್ನು ತಲುಪುವ ಭರವಸೆ ಮೂಡಿಸುತ್ತಿದೆ.

ಈ ಸಿನಿಮಾ ತಂಡದಿಂದ ಮುಂದಿನ ದಿನಗಳ್ಲಲಿ ಮತ್ತಷ್ಟು ಮಾಹಿತಿಗಾಗಿ ಕಾಯಬೇಕಾಗಿದೆ.