Current Date 30 Sep, 2026

ಒಂದೇ ದಿನ ದರ್ಶನ್ ನಟನೆಯ 2 ಚಿತ್ರಗಳು ರೀ-ರಿಲೀಸ್; ಗೊಂದಲದಲ್ಲಿ ಫ್ಯಾನ್ಸ್

ನಟ ದರ್ಶನ್ ಬಳ್ಳಾರಿ ಜೈಲಿನಲ್ಲಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ವಿಚಾರಣಾಧೀನ ಕೈದಿಯಲ್ಲಿ ಸೆರೆವಾಸ ಅನುಭವಿಸುವಂತಾಗಿದೆ. ಹೈಕೋರ್ಟ್‌ನಲ್ಲಿ ಜಾಮೀನು ಪಡೆಯಲು ವಕೀಲರ ಮೂಲಕ ದರ್ಶನ್ ಪ್ರಯತ್ನಿಸುತ್ತಿದ್ದಾರೆ. ಇತ್ತ ಅವರ ಹಿಟ್ ಸಿನಿಮಾಗಳು ಒಂದರ ಹಿಂದೆ ಒಂದು ರೀ-ರಿಲೀಸ್ ಆಗುತ್ತಿದೆ. ಕನ್ನಡದಲ್ಲಿ ದೊಡ್ಡ ಚಿತ್ರಗಳು ತೆರೆಗೆ ಬರದೇ ಹಳೇ ಚಿತ್ರಗಳನ್ನೇ ಹೊಸ ರೂಪದಲ್ಲಿ ತೆರೆಗೆ ತರುವ ಪ್ರಯತ್ನಗಳು ನಡೀತಿದೆ. ದರ್ಶನ್ ಜೈಲು ಸೇರಿದ ಮೇಲೆ 'ಶಾಸ್ತ್ರೀ' ಹಾಗೂ 'ಕರಿಯ' ಚಿತ್ರಗಳು ಹೊಸ ರೂಪದಲ್ಲಿ ಮತ್ತೆ ತೆರೆಗೆ ಬಂದಿತ್ತು. ಕಳೆದ ವಾರವಷ್ಟೆ 'ಪೊರ್ಕಿ' ಸಿನಿಮಾ ರೀ-ರಿಲೀಸ್ ಆಗಿತ್ತು. ಇದೀಗ ಮತ್ತೆರಡು ಚಿತ್ರಗಳನ್ನು ಒಂದೇ ದಿನ ಪ್ರೇಕ್ಷಕರ ಮುಂದೆ ತರಲಾಗುತ್ತಿದೆ.