Current Date 31 Jul, 2026

ಅಪರ್ಣ ವಸ್ತಾರೆ ನಟಿಸಿದ ಕೊನೆಯ ಸಿನಿಮಾ ಯಾವುದು? ಅದರಲ್ಲಿ ಅವರ ಪಾತ್ರವೇನು?


ಇತ್ತೀಚೆಗೆ ಅಪಾರ ಅಭಿಮಾನಿಗಳನ್ನು ಅಗಲಿದ ಅಚ್ಚ ಕನ್ನಡದ ನಿರೂಪಕಿ ಅಪರ್ಣ ವಸ್ತಾರೆ. ಶ್ವಾಸಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಈ ನಿರೂಪಕಿಯ ಅಗಲಿಗೆ ಅದೆಷ್ಟೋ ಮಂದಿಗೆ ಇನ್ನೂ ಅರಗಿಸಿಕೊಳ್ಳುವುದಕ್ಕೆ ಆಗುತ್ತಿಲ್ಲ. ಅಪರ್ಣ ಅವರ ಅಚ್ಚ ಕನ್ನಡದ ಮಾತುಗಳು ಆ ಮಟ್ಟಿಗೆ ಕನ್ನಡಿಗರ ಮನಗೆದ್ದಿದ್ದವು. ಈ ನಿರೂಪಕಿ ಅನಾರೋಗ್ಯದ ಮಧ್ಯೆಯೂ ಸಿನಿಮಾದಲ್ಲಿ ನಟಿಸುತ್ತಿದ್ದರು. ಇದು ಬಹುಶ: ಅಪರ್ಣ ನಟನೆಯ ಕೊನೆಯ ಸಿನಿಮಾ.

ಅಪರ್ಣ ಮೊದಲು ವೃತ್ತಿ ಬದುಕು ಆರಂಭ ಮಾಡಿದ್ದು ಸಿನಿಮಾದಿಂದಲೇ. ಪುಟ್ಟಣ್ಣ ಕಣಗಾಲ್ ನಿರ್ದೇಶನದ ಕೊನೆಯ ಸಿನಿಮಾ 'ಮಸಣದ ಹೂವು'ನಲ್ಲಿ ಅಪರ್ಣ ನಟಿಸಿದ್ದರು. ಆ ಬಳಿಕ ಒಂದಿಷ್ಟು ಸಿನಿಮಾಗಳಲ್ಲಿ ನಟಿಸಿದ ನಂತರ ನಿರೂಪಣೆ ಕಡೆಗೆ ಮುಖ ಮಾಡಿದ್ದರು. ನಿರೂಪಣೆ ಅಪರ್ಣ ಅವರ ಕೈ ಹಿಡಿದಿತ್ತು. ಹೆಸರು ಹಾಗೂ ಹಣ ಅವರನ್ನು ಹಿಂಬಾಲಿಸಿಕೊಂಡು ಬಂದಿತ್ತು.