Current Date 24 Sep, 2026

ಕೆಲಸ ಮಾಡುವ ಸ್ಥಳದಲ್ಲಿಯೂ ಹೆಣ್ಣು ಸುರಕ್ಷಿತವಾಗಿಲ್ಲ ಅಂದರೆ ಇನ್ನೆಲ್ಲಿ ? ಆಶಿಕಾ ರಂಗನಾಥ್..!


ಈ ನೆಲದ ಮೇಲೆ ಹುಟ್ಟಿ, ಉಸಿರಾಡಲೂ ಯೋಗ್ಯತೆಯಿಲ್ಲದ ಕ್ರಿಮಿಗಳು ಹೆಣ್ಣೊಬ್ಬಳ ಮೇಲೆ ಎರಗಿ ಆಕೆಯ ದೇಹ, ಮನಸ್ಸನ್ನು ಗಾಯಗೊಳಿಸುತ್ತವೆ. ಹೆಣ್ಣಿನ ಮೇಲೆ ಗಂಡಿನ ಶೋಷಣೆ, ಅತ್ಯಾಚಾರದ ಕುರಿತಾದ ಸುದ್ದಿಗಳನ್ನು ನೋಡುತ್ತಲೇ ಕೇಳುತ್ತಲೇ ಇದ್ದೇವೆ.

ಸ್ತ್ರೀಯನ್ನು ದೈವೀ ಸ್ವರೂಪದಲ್ಲಿ ಸ್ವೀಕರಿಸಿರುವ ಭಾರತದಂತಹ ರಾಷ್ಟ್ರದಲ್ಲೂ ಸ್ತ್ರೀಯರನ್ನು ನಡೆಸಿಕೊಳ್ಳುತ್ತಿರುವ ರೀತಿಯ ಕುರಿತಾಗಿ ಬೆಂಕಿ ಹತ್ತಿ ಕೆಂಡ ಆರುವವರೆಗೂ ವಿರೋಧಿ ಘೋಷಣೆಗಳು, ಧರಣಿಗಳು, ಮೆರವಣಿಗೆಗಳನ್ನು ಮಾಡುತ್ತಲೇ ಇದ್ದೇವೆ. ಆದರೂ ಮಹಿಳೆ ವಿರುದ್ಧ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಇದಕ್ಕೆ ಇನ್ನೊಂದು ಕೈಗನ್ನಡಿ ಎಂಬಂತೆ ಕೋಲ್ಕತ್ತಾದಲ್ಲಿ ಅಶ್ಲೀಲ ಚಿತ್ರ ವ್ಯಸನಿ, ಹೆಣ್ಣುಬಾಕನೊಬ್ಬ ಕೋಲ್ಕತ್ತಾದ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯೆಯೊಬ್ಬರ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿದ್ದಾನೆ.