ಸ್ಯಾಂಡಲ್‌ವುಡ್‌ನಲ್ಲಿ ಬಹಳ ದಿನಗಳ ಬಳಿಕ ಸ್ಟಾರ್ ಸಿನಿಮಾ ರಿಲೀಸ್ ಆಗಿದೆ. ದುನಿಯಾ ವಿಜಯ್ ನಟಿಸಿ, ನಿರ್ದೇಶಿಸಿರುವ 'ಭೀಮ'ಗೆ ಗ್ರ್ಯಾಂಡ್ ಓಪನಿಂಗ್ ಸಿಕ್ಕಿದೆ. ಆದರೆ, ಈ ಸಿನಿಮಾ ರಿಲೀಸ್‌ಗೂ ಮುನ್ನ ಅವರ ಅಭಿಮಾನಿಗಳು ಹುಚ್ಚಾಟ ಮೆರೆದಿದ್ದಾರೆ. ಥಿಯೇಟರ್ ಗೇಟಿನ ಭೀಗ ಮುರಿದು ಒಳಗೆ ನುಗ್ಗಿದ್ದಾರೆ.
'ಭೀಮ' ದುನಿಯಾ ವಿಜಯ್ ನಿರ್ದೇಶನದ ಎರಡನೇ ಸಿನಿಮಾ. ಇದಕ್ಕೂ ಮುನ್ನ 'ಸಲಗ' ಸಿನಿಮಾವನ್ನು ನಿರ್ದೇಶಿಸಿ ಗೆದ್ದಿರುವ ವಿಜಯ್ ಈಗ ಎರಡನೇ ಬಾರಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಹೀಗಾಗಿ ದುನಿಯಾ ವಿಜಯ್ ಅಭಿಮಾನಿಗಳು 'ಭೀಮಾ' ನೋಡುವ ತವಕದಲ್ಲಿ ಇದ್ದರು. ತಮಗಾಗಿ ವಿಶೇಷ ಶೋ ಅನ್ನು ಹಾಕಬಹುದು ಎಂಬ ನಿರೀಕ್ಷೆಯಲ್ಲಿದ್ದರು. ಆದರೆ, ಚಿತ್ರರಂಗ ರೆಗ್ಯೂಲರ್ ಶೋಗೆ ಮುಂದಾಗಿತ್ತು.