ನಿನ್ನೆ (ಆಗಸ್ಟ್ 18) ತಾನೇ ವಿನಯ್ ರಾಜ್‌ಕುಮಾರ್ ಅಭಿನಯದ 'ಪೆಪೆ' ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಪೆಪೆ ಟ್ರೈಲರ್‌ಗೆ ಒಳ್ಳೆಯ ಅಭಿಪ್ರಾಯ ಕೂಡ ವ್ಯಕ್ತವಾಗುತ್ತಿದೆ. ಕಿಚ್ಚ ಸುದೀಪ್ ವಿಶೇಷ ಅತಿಥಿಯಾಗಿ ಈ ಸಿನಿಮಾದ ಟ್ರೈಲರ್ ಲಾಂಚ್ ಮಾಡಿದ್ದರು. ಈ ವೇಳೆ ಕನ್ನಡ ಚಿತ್ರರಂಗದ ಸದ್ಯದ ಪರಿಸ್ಥಿತಿಯ ಬಗ್ಗೆ ಖಡಕ್ ಆಗಿ ಮಾತಾಡಿದ್ದಾರೆ.
ಕಿಚ್ಚ ಸುದೀಪ್‌ಗೆ 'ಪೆಪೆ' ಸಿನಿಮಾದ ಟ್ರೈಲರ್ ಅನ್ನು ವಿನಯ್ ರಾಜ್‌ಕುಮಾರ್ ಒಂದು ದಿನ ಮುನ್ನವೇ ತೋರಿಸಿದದರು. ವಿನಯ್ ರಾಜ್‌ಕುಮಾರ್ ರಗಡ್ ಲುಕ್ ಕಿಚ್ಚ ಸುದೀಪ್‌ಗೆ ಸಿಕ್ಕಾಪಟ್ಟೆ ಇಷ್ಟ ಆಗಿದೆ. ಈ ಕಾರಣಕ್ಕೆ ವೇದಿಕೆ ಮೇಲೆ ವಿನಯ್ ರಾಜ್‌ಕುಮಾರ್‌ರನ್ನು ಸುದೀಪ್ ಹಾಡಿ ಹೊಗಳಿದ್ದಾರೆ. 'ಪೆಪೆ' ಟ್ರೈಲರ್ ನೋಡಿ, "ವಿನಯ್ ಫೈನಲಿ ಯು ಆರ್ ಬಿಕಮ್ ಎ ಮ್ಯಾನ್" ಎಂದು ಹೇಳಿದ್ದಾರೆ. ಅಷ್ಟಕ್ಕೂ ಕಿಚ್ಚ ಹೇಳಿದ ಈ ಮಾತಿನ ಅರ್ಥವೇನು? ಅನ್ನೋದನ್ನು ತಿಳಿಯಲು ಮುಂದೆ ಓದಿ.