Current Date 24 Sep, 2026

''ರಾಜನನ್ನು ರಾಜನಂತೆಯೇ ನೋಡಲು ನನಗೆ ಇಷ್ಟ'', ದಚ್ಚು ನೋಡಿ ರಚ್ಚು ಕಣ್ಣೀರು..!


ದರ್ಶನ್ ಸದ್ಯಕ್ಕೆ ಪರಪ್ಪನ ಅಗ್ರಹಾರದಲ್ಲಿದ್ದಾರೆ. ಯಾವತ್ತು ಹೊರ ಬರುತ್ತಾರೆ ಎನ್ನುವುದು ಆ ಕೃಷ್ಣ ಪರಮಾತ್ಮನೆ ಬಲ್ಲ. ಆದರೇನಂತೆ, ನಾವು ಆ ಕೃಷ್ಣನ ಜನ್ಮಸ್ಥಾನಕ್ಕೆ ತೆರಳಿ ದರ್ಶನ್ ದರ್ಶನವನ್ನು ಪಡೆಯುತ್ತೇವೆ ಎಂದು ಕನ್ನಡ ಚಿತ್ರರಂಗದ ಅನೇಕರು ಪರಪ್ಪನ ಅಗ್ರಹಾರದತ್ತ ಪರೇಡ್ ನಡೆಸಿದ್ಧಾರೆ. ಈ ಸಾಲಿಗೆ ಈಗ ರಚಿತಾ ರಾಮ್ ಕೂಡ ಸೇರಿಕೊಂಡಿದ್ದಾರೆ.

ಹೌದು, ನಿನ್ನೆ-ಮೊನ್ನೆ ಬಂದವರೆಲ್ಲ ಬಾಸು ಇಲ್ಲದೆ ನಮ್ಮ ತ್ರಾಸ್ ಆಗ್ತಿದೆ ಎಂದು, ಒಬ್ಬರಾದ ಮೇಲೆ ಒಬ್ಬರು ಪರಪ್ಪನ ಅಗ್ರಹಾರಕ್ಕೆ ತೆರೆಳಿ ಅಡ್ಡಡ್ಡ ಬಿದ್ದು ಬರುತ್ತಿದ್ದಾರೆ. ಇನ್ನೂ ಕೆಲವರು ತಮ್ಮಿಂದ ಸಹಾಯ ಪಡೆದು ಕಷ್ಟಕಾಲದಲ್ಲಿ ನೋಡಲು ಬರಲಿಲ್ಲ ಎಂದು ದರ್ಶನ್ ಅಂದುಕೊಂಡರೆ ಎಂಬ ಭಯದಲ್ಲಿ ದರ್ಶನ ಪಡೆದು ಬರುತ್ತಿದ್ದಾರೆ. ಮತ್ತೂ ಕೆಲವರು ದರ್ಶನ್ ಹೊರ ಬಂದ ಮೇಲೆ ಯಾರೆಲ್ಲ ಬಂದಿಲ್ಲ ಅವರ ಹೆಸರನ್ನೆಲ್ಲ ಪಟ್ಟಿ ಮಾಡಿಕೊಂಡು ತಿನ್ನುವ ಅನ್ನಕ್ಕೆ ಕಲ್ಲು ಹಾಕಿದರೆ ಏನು ಗತಿ ಎಂದು ಹೆದರಿಕೊಂಡು ಕೂಡ ಹೋಗಿ ಬರುವುದನ್ನು ಮಾಡುತ್ತಿದ್ದಾರೆ. ಹೀಗಿರುವಾಗ ಕಿರುತೆರೆಯಲ್ಲಿ ಸದ್ದು ಮಾಡುತ್ತಲೇ ಒಮ್ಮಿಂದೊಮ್ಮೆಲೇ ದರ್ಶನ್‌ ಗೆ ನಾಯಕಿಯಾದ ರಚಿತಾ ರಾಮ್ ಹೇಗೆ ತಾನೇ ಸುಮ್ಮನೆ ಕೂರಲು ಸಾಧ್ಯ..?