Current Date 24 Sep, 2026

ಬಹಳ ದಿನಗಳ ನಂತ್ರ ರಾಕಿ- ದೇವ ಮುಖಾಮುಖಿ" ಯಶ್‌ಗೆ ಶಿವಣ್ಣ ನೆನಪಾಗಿದ್ದೇಕೆ ಏಕಾಏಕಿ?

ರಾಕಿಂಗ್ ಸ್ಟಾರ್ ಯಶ್ 'ಟಾಕ್ಸಿಕ್' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಅತ್ತ ಶಿವಣ್ಣ 131ನೇ ಸಿನಿಮಾದ ಶೂಟಿಂಗ್ ಅನ್ನು ಶುರು ಮಾಡಿದ್ದಾರೆ. ಇಬ್ಬರೂ ತಮ್ಮದೇ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಷ್ಟೇ ಅಲ್ಲ. ಒಂದೇ ಕಡೆ ಶೂಟಿಂಗ್ ಮಾಡುತ್ತಿದ್ದಾರೆ. ಇದು ಇಬ್ಬರ ಅಭಿಮಾನಿಗಳಿಗೂ ಮತ್ತಷ್ಟು ಥ್ರಿಲ್ ಕೊಟ್ಟಿದೆ.

ಟಾಕ್ಸಿಕ್' ಸಿನಿಮಾಗಾಗಿ ಬೆಂಗಳೂರಿನ ಎಚ್‌ಎಂಟಿ ಫ್ಯಾಕ್ಟರಿಯಲ್ಲಿ ಬೃಹತ್ ಪ್ರಮಾಣದ ಸೆಟ್ ಹಾಕಲಾಗಿದೆ. ಇತ್ತೀಚೆಗೆಷ್ಟೇ ಈ ಸಿನಿಮಾದ ಮುಹೂರ್ತ ಕೂಡ ಆರಂಭ ಆಗಿತ್ತು. ಅತ್ತ ಇದೇ ಎಚ್‌ಎಂಟಿ ಫ್ಯಾಕ್ಟರಿಯಲ್ಲಿ ಶಿವಣ್ಣ ಸಿನಿಮಾದ ಶೂಟಿಂಗ್ ಕೂಡ ಆರಂಭ ಆಗಿದೆ. ಇದೇ ವರಮಹಾಲಕ್ಷ್ಮಿ ಹಬ್ಬದಂದು ಶಿವಣ್ಣನ 131ನೇ ಸಿನಿಮಾದ ಶೂಟಿಂಗ್ ಆರಂಭ ಆಗಿದೆ.