ಕೊಲ್ಕತ್ತಾದ ಸರ್ಕಾರಿ ಸ್ವಾಮ್ಯಕ್ಕೆ ಒಳಪಟ್ಟಿರುವ ಆರ್‌ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕಿರಿಯ ವೈದ್ಯೆಯ ಮೇಲೆ ಅಮಾನುಷವಾಗಿ ಅತ್ಯಾಚಾರವೆಸಗಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಆಗಸ್ಟ್ 9ರಂದು ರಾತ್ರಿಪಾಳಿಯಲ್ಲಿದ್ದ ಟ್ರೈನಿ ವೈದ್ಯೆಯ ಮೇಲೆ ಅತ್ಯಾಚಾರ ಎಸಗಲಾಗಿತ್ತು. ಸುಮಾರು 36 ಗಂಟೆಗಳ ಕಾಲ ನಿರಂತರ ಕೆಲಸ ಮಾಡಿದ್ದ ವೈದ್ಯೆ ವಿಶ್ರಾಂತಿಗೆಂದು ತೆರಳಿದ್ದರು. ಆ ವೇಳೆ ಅತ್ಯಾಚಾರ ಮಾಡಿ, ಹಿಂಸೆ ಕೊಟ್ಟು ಹತ್ಯೆ ಮಾಡಲಾಗಿತ್ತು.
ಕೊಲ್ಕತ್ತಾದ ಆಸ್ಪತ್ರೆಯಲ್ಲಿ ಅತ್ಯಾಚಾರಕ್ಕೆ ಒಳಗಾದ 31 ಟ್ರೈನಿ ವೈದ್ಯೆಯ ಪ್ರಾಥಮಿಕ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಆಘಾತಕಾರಿ ಅಂಶಗಳು ಹೊರಬಿದ್ದಿದೆ. ಅತ್ಯಾಚಾರ ಎಸಗಿರೋ ಆರೋಪಿ ಸಂಜಯ್ ರಾಯ್ ವೈದ್ಯೆ ಮೇಲೆ ಬರ್ಬರವಾಗಿ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ವೈದ್ಯೆಯ ಎರಡೂ ಕಣ್ಣು ಬಾಯಿಯಲ್ಲಿ ರಕ್ತಸ್ರಾವವಾಗಿದೆ. ವೈದ್ಯೆಯ ಗುಪ್ತಾಂಗಗಳಿಂದಲೂ ರಕ್ತ ಸುರಿದಿದ್ದು, ದೇಹದ ಹಲವು ಭಾಗಗಳಲ್ಲಿ ಗಾಯಗಳಾಗಿವೆ ಎಂದು ವರದಿಯಾಗಿದೆ.