ಶ್ವಾನಗಳನ್ನು ಇಟ್ಟುಕೊಂಡು ಸಿನಿಮಾ ಮಾಡೋದು ತುಂಬಾ ಕಷ್ಟ. ಆದರೆ, ಪ್ರಪಂಚದ ಯಾವುದೇ ಮೂಲೆ ಮೂಲೆಗೆ ಹೋಗದರೂ ಶ್ವಾನ ಪ್ರಿಯರು ಇದ್ದೇ ಇರುತ್ತಾರೆ. ಅವರಿಗೆ ಇಂತಹ ಸಿನಿಮಾ ಇಷ್ಟ ಆಗುತ್ತವೆ. ಕನ್ನಡದಲ್ಲಿ ನಾಯಿಯನ್ನು ಪ್ರಮುಖ ಪಾತ್ರದಲ್ಲಿ ಇಟ್ಟುಕೊಂಡು ಹೊಸ ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ. ಅದುವೇ 'ನಾನು ಮತ್ತು ಗುಂಡ 2'.
ಈಗಾಗಲೇ 'ನಾನು ಮತ್ತು ಗುಂಡ' ಸಿನಿಮಾ ತೆರೆಕಂಡಿತ್ತು. ಆ ಸಿನಿಮಾದ ಸೀಕ್ವೇಲ್ 'ನಾನು ಮತ್ತು ಗುಂಡ -2'. ಎರಡನೇ ಸರಣಿಯಲ್ಲಿ ಸಿನಿಮಾ ತಾರಾ ಬಳಗ ಬದಲಾಗಿದ್ದಾರೆ. ಶಿವು ಕೆ ಆರ್ ಪೇಟೆ ಜಾಗದಲ್ಲಿ ನಾಯಕನಾಗಿ ರಾಕೇಶ್ ಅಡಿಗ ಕಾಣಿಸಿಕೊಳ್ಳುತ್ತಿದ್ದಾರೆ. ಇವರ ಜೊತೆಗೆ ವಿಶೇಷ ಪಾತ್ರದಲ್ಲಿ ಶ್ವಾನ ಸಿಂಬ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದೆ. ಶ್ವಾನ ಪ್ರಿಯರಿಗೆ ಈ ಸಿನಿಮಾ ಇಷ್ಟ ಆಗುವ ಎಲ್ಲಾ ಸಾಧ್ಯತೆಗಳೂ ಇವೆ.