ಚಾಲೆಂಜಿಂಗ್ ಸ್ಟಾರ್ ದರ್ಶನ್ ಜಾಮೀನು ಅರ್ಜಿ ಸದ್ಯಕ್ಕೀಗ ಹಾಟ್ ಟಾಪಿಕ್ ಆಗಿದೆ. ಬೆಂಗಳೂರಿನ 57ನೇ ಸಿಸಿಎಚ್ ಕೋರ್ಟ್ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ಬಳಿಕ ದರ್ಶನ್ ಮುಂದಿನ ನಡೆಯೇನು ಅನ್ನೋದನ್ನು ಅವರ ಅಭಿಮಾನಿಗಳು ಕುತೂಹಲದಿಂದ ನೋಡುತ್ತಿದ್ದರು. ನಿರೀಕ್ಷೆಯಂತೆ ದರ್ಶನ್ ಹೈ ಕೋರ್ಟ್ ಮೊರೆ ಹೋಗಿದ್ದಾರೆ. ದರ್ಶನ್‌ಗೆ ಜಾಮೀನು ಕೋರಿ ಅವರ ಪರ ವಕೀಲ ಎಸ್ ಸುನಿಲ್ ಕುಮಾರ್ ಹೈ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ನಿನ್ನೆ (ಅಕ್ಟೋಬರ್ 15) ದರ್ಶನ್ ಪರ ವಕೀಲ ಹೈಕೋರ್ಟ್‌ನ ಫೈಲಿಂಗ್ ವಿಭಾಗಕ್ಕೆ ಜಾಮೀನು ಕೋರಿ ಸುಮಾರು 300 ಪುಟಗಳ ಅರ್ಜಿಯನ್ನು ಸಲ್ಲಿಸಿದ್ದಾರೆ. ಈ ಜಾಮೀನು ಅರ್ಜಿಗೆ ನ್ಯಾಯಾಲಯದಲ್ಲಿ ಎಫ್‌ಆರ್ ನಂಬರ್ ನೀಡಲಾಗಿದ್ದು, ಪರಿಶೀಲನೆ ಬಳಿಕ ಕ್ರಿಮಿನಲ್ ಅರ್ಜಿ ಸಂಖ್ಯೆ ದೊರಕಲಿದೆ ಎನ್ನಲಾಗುತ್ತಿದೆ.