Current Date 23 Sep, 2026

ಸೆನ್ಸಾರ್ ಮುಗಿಸಿದ 'ಭೀಮ' ಹಾಗೂ 'ಪೆಪೆ'; ಎರಡೂ ಚಿತ್ರಗಳ ರನ್‌ ಟೈಮ್ ರಿವೀಲ್

ಈ ವರ್ಷ ಕನ್ನಡದ ದೊಡ್ಡ ಸಿನಿಮಾಗಳ ಬಿಡುಗಡೆ ಸನಿಹವಾಗುತ್ತಿದೆ. ದುನಿಯಾ ವಿಜಯ್ ನಟನೆಯ 'ಭೀಮ' ಹಾಗೂ ವಿನಯ್ ರಾಜ್‌ಕುಮಾರ್ ನಟನೆಯ 'ಪೆಪೆ' ಸಿನಿಮಾಗಳು ಸೆನ್ಸಾರ್ ಮುಗಿಸಿವೆ.

ಆಗಸ್ಟ್ 9ಕ್ಕೆ 'ಭೀಮ'ನಾಗಿ ವಿಜಯ್ ತೆರೆಮೇಲೆ ಅಬ್ಬರಿಸುವುದು ಪಕ್ಕಾ ಆಗಿದೆ. ಆದರೆ 'ಪೆಪೆ' ರಿಲೀಸ್ ಡೇಟ್ ಇನ್ನಷ್ಟೆ ಘೋಷಣೆ ಆಗಬೇಕಿದೆ. ಎರಡೂ ಸಿನಿಮಾಗಳು ಕುತೂಹಲ ಮೂಡಿಸಿರುವುದು ಸುಳ್ಳಲ್ಲ. 'ಪೆಪೆ' ಸಣ್ಣ ಟೀಸರ್‌ಗಳಿಂದ ಸದ್ದು ಮಾಡಿದರೆ 'ಭೀಮ' ಚಿತ್ರದ ಸಾಂಗ್ಸ್ ಹಿಟ್ ಆಗಿದೆ. ಇದೇ ಮೊದಲ ಬಾರಿಗೆ ವಿನಯ್ ಔಟ್ ಅಂಡ್ ಔಟ್ ಮಾಸ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.