Current Date 22 Sep, 2026

ʼಫೈರ್‌ ಫ್ಲೈʼ ತಂಡ ಸೇರಿದ ಶೀತಲ್‌ ಶೆಟ್ಟಿ


ಶಿವರಾಜ್‌ ಕುಮಾರ್‌ ಅವರ ಪುತ್ರಿ ನಿವೇದಿತಾ ಶಿವರಾಜ್‌ ಕುಮಾರ್‌ ನಿರ್ಮಾಣದ ಚೊಚ್ಚಲ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ನಿವೇದಿತಾ ಒಡೆತನದ ಶ್ರೀಮುತ್ತು ಸಿನಿ ಸರ್ವೀಸಸ್‌ನಡಿ ಮೂಡಿ ಬಂದಿರುವ “ಫೈರ್‌ ಫ್ಲೈ’ ಚಿತ್ರಕ್ಕೀಗ ನಿರೂಪಕಿ ಹಾಗೂ ನಿರ್ದೇಶಕಿಯಾಗಿರುವ ಶೀತಲ್‌ ಶೆಟ್ಟಿ ಎಂಟ್ರಿ ಕೊಟ್ಟಿದ್ದಾರೆ. ನಟನೆ ಬಿಟ್ಟು ನಿರ್ದೇಶನಕ್ಕಿಳಿದಿದ್ದ ಶೀತಲ್‌ ಇದೀಗ ಮತ್ತೂಮ್ಮೆ ನಟನೆಯತ್ತ ಕಂಬ್ಯಾಕ್‌ ಮಾಡಿದ್ದಾರೆ.

ಚಿತ್ರದಲ್ಲಿ ವಂಶಿ ಹೀರೋ ಆಗಿ ನಟಿಸುತ್ತಿದ್ದಾರೆ. ನಿರ್ದೇಶನದ ಜವಾ ಬ್ದಾರಿ ಕೂಡ ಅವರದ್ದೇ ಎಂಬುದು ವಿಶೇಷ. ಚಿತ್ರಕ್ಕೆ ಚರಣ್‌ ರಾಜ್‌ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ರಘು ನಿಡುವಳ್ಳಿ ಅವರು ಸಂಭಾಷಣೆಯ ಬರೆದಿದ್ದಾರೆ.