ಇತ್ತೀಚೆಗೆ ಸಿನಿಮಾ ನೋಡುವುದಕ್ಕೆ ಥಿಯೇಟರ್‌ಗೆ ಬರುವವರೇ ಕಮ್ಮಿಯಾಗಿದ್ದಾರೆ. ಸಿಂಗಲ್ ಸ್ಕ್ರೀನ್‌ಗಳಂತೂ ಒಂದುವಾರಕ್ಕಷ್ಟೇ ಸೀಮಿತವಾಗಿದೆ ಅನ್ನೋದು ಸಿನಿಮಾ ಮಂದಿಯ ಅಳಲು. ಆದರೆ, ಆಗಸ್ಟ್ ತಿಂಗಳು ಕನ್ನಡ ಚಿತ್ರರಂಗಕ್ಕಂತೂ ಪಾಸಿಟಿವ್ ಅಂತ ಸಾಬೀತಾಗಿದೆ. ಇದೇ ಖುಷಿಯಲ್ಲಿ ಗಣೇಶ್ ಚತುರ್ಥಿಗೆ ಪ್ರೇಕ್ಷಕರಿಗೆ ಮನರಂಜನೆ ನೀಡುವುದಕ್ಕೆ ನಿರ್ಧರಿಸಿದ್ದಾರೆ.
ಗಣೇಶ ಚತುರ್ಥಿಯಲ್ಲಿ ಜನರು ಎಂಜಾಯ್ ಮಾಡುತ್ತಾರೆ. ರಿಲ್ಯಾಕ್ಸ್ ಆಗಿ ಹಬ್ಬ ಮಾಡಿ, ಫ್ಯಾಮಿಲಿ ಜೊತೆ ಸಿನಿಮಾ ನೋಡುವುದಕ್ಕೆ ಹೋಗುವುದು ಕೆಲವರಿಗೆ ಅಭ್ಯಾಸ. ಹೀಗಾಗಿ ಈ ಸಂದರ್ಭದಲ್ಲಿ ಸಿನಿಮಾ ಮಂದಿ ಹಬ್ಬವನ್ನು ಬಳಸಿಕೊಳ್ಳುತ್ತಾರೆ. ಸಿನಿಮಾಗಳನ್ನು ರಿಲೀಸ್ ಮಾಡುವುದಕ್ಕೆ ತುದಿಗಾಲಲ್ಲಿ ನಿಂತಿರುತ್ತಾರೆ. ನಾಲ್ಕೈದು ತಿಂಗಳ ಮುಂದೇನೆ ಸಿನಿಮಾ ಬಿಡುಗಡೆಗೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಾರೆ.