Current Date 24 Sep, 2026

'ಜಿಂಗೋ' ಧನಂಜಯಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರೇರಣೆ?

ನಟ ಡಾಲಿ ಧನಂಜಯ್ ಒಂದಕ್ಕಿಂತ ಒಂದು ವಿಭಿನ್ನ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಸಾಕಷ್ಟು ಪ್ರಯೋಗಗಳಿಗೂ ತಮ್ಮನ್ನು ಒಡ್ಡಿಕೊಳ್ಳುತ್ತಾರೆ. ಹೀರೊ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಧನು 'ಟಗರು' ಚಿತ್ರದಲ್ಲಿ ವಿಲನ್ ಡಾಲಿ ಆಗಿ ಅಬ್ಬರಿಸಿದ್ದರು. ಆ ಬಳಿಕ ಕೂಡ ಕಥೆಗಳ ವಿಚಾರದಲ್ಲಿ ವಿಭಿನ್ನವಾಗಿ ಆಲೋಚಿಸುತ್ತಿದ್ದಾರೆ.

ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಡಾಲಿ ಧನಂಜಯ್‌ಗೆ ಶುಭಾಶಯಗಳ ಮಹಾಪೂರವೇ ಹರಿದು ಬರ್ತಿದೆ. ಇದೇ ಸಮಯದಲ್ಲಿ ಧನು ನಟನೆಯ 'ಜಿಂಗೋ' ಚಿತ್ರದ ಸಣ್ಣ ಟೀಸರ್ ರಿಲೀಸ್ ಆಗಿದೆ. ಕ್ರಾಂತಿಯ ಕಿಚ್ಚು ಹಚ್ಚುವ ನಾಯಕನಾಗಿ ಡಾಲಿ ನಟಿಸಿದ್ದಾರೆ. ಮೊದಲ ನೋಟದಲ್ಲೇ ಟೀಸರ್ ಗಮನ ಸೆಳೆಯುವಂತಿದೆ. ಸಿನಿಮಾ ಬಗ್ಗೆ ನಿರೀಕ್ಷೆ ಮೂಡಿಸಿದೆ.