Current Date 31 Jul, 2026

ತರುಣ್ ಸುಧೀರ್- ಸೋನಾಲ್ ಆರತಕ್ಷತೆಗೆ ಗಣ್ಯರ ದಂಡು; ಯಡಿಯೂರಪ್ಪ, ಹಂಸಲೇಖ ಸೇರಿ ಶುಭ ಹಾರೈಸಿದ ತಾರೆಯರು

ಸ್ಯಾಂಡಲ್‌ವುಡ್‌ನ ಸ್ಟಾರ್ ಡೈರೆಕ್ಟರ್ ತರುಣ್ ಸುಧೀರ್ ಹಾಗೂ ನಟಿ ಸೋನಾಲ್ ಮಾಂಥೆರೋ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ನಾಳೆ (ಆಗಸ್ಟ್ 11) ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ಹಿಂದೂ ಸಂಪ್ರದಾಯದಂತೆ ದಾಂಪತ್ಯಕ್ಕೆ ಕಾಲಿಡುತ್ತಿದ್ದಾರೆ. ಅದಕ್ಕೂ ಮುನ್ನ ಚಿತ್ರರಂಗ ಹಾಗೂ ರಾಜಕೀಯ ಕ್ಷೇತ್ರದ ಗಣ್ಯರಿಗಾಗಿ ಆರತಕ್ಷತೆಯನ್ನು ಹಮ್ಮಿಕೊಳ್ಳಲಾಗಿದೆ.

ರೆಡ್ ರೋಸ್ ಹಾಗೂ ಸಿಲ್ವರ್ ಥೀಮ್‌ನಲ್ಲಿ ವೇದಿಕೆಯನ್ನು ಅಲಂಕಾರ ಮಾಡಲಾಗಿತ್ತು. ಸಿನಿಮಾದ ಇವೆಂಟ್ ನಡೆಯುವ ಶೈಲಿಯಲ್ಲಿಯೇ ಈ ವೇದಿಕೆಯನ್ನು ನಿರ್ಮಾಣ ಮಾಡಲಾಗಿತ್ತು. ಇದರ ಮಧ್ಯೆ ತರುಣ್ ಸುಧೀರ್ ಹಾಗೂ ಸೋನಾಲ್ ಮಾಂಥೆರೋ ಅವರ ಬಾಲ್ಯದ ಫೋಟೊಗಳಿಂದ ಹಿಡಿದು ಇಲ್ಲಿವರೆಗಿನ ವಿಶೇಷವಾದ ಫೋಟೊಗಳನ್ನು ವೇದಿಕೆ ಮೇಲೆ ಇರಿಸಲಾಗಿದೆ. ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ನಾದಬ್ರಹ್ಮ ಹಂಸಲೇಖ, ಹಿರಿಯ ನಟಿ ಮಾಲಾಶ್ರೀ ಸೇರಿದಂತೆ ಹಿರಿಯ ಕಲಾವಿದರು ನವ ಜೋಡಿಗೆ ಶುಭ ಹಾರೈಸಿದ್ದಾರೆ. ಇವರೊಂದಿಗೆ ಕೆ.ಮಂಜು, ಅನಿರುದ್ಧ್ಜತ್ಕರ್, ಸಂತೋಷ್ಆನಂದ್ರಾಮ್, ರವಿಶಂಕರ್ಗೌಡ, ಪವನ್ಒಡೆಯರ್, ಕಾರುಣ್ಯ ರಾಮ್, ಉಮಾಪತಿ ಶ್ರೀನಿವಾಸ್ಗೌಡ, ಹರ್ಷಿಕಾ ಪೂಣಚ್ಚ ಹಲವು ಆಗಮಿಸಿ ನವ ಜೋಡಿಗೆ ಆಶೀರ್ವಾದ ಮಾಡಿ ಶುಭ ಹಾರೈಸಿದ್ದಾರೆ.