Current Date 22 Sep, 2026

"ದರ್ಶನ್ ಮಗ ತಂದೆಯ ಮುಖ ನೋಡಬಾರದು ಅಂತ ಹೇಳುವ ಯೋಗ್ಯತೆ ಇದೆಯಾ?"; ನಟಿಯರಿಗೆ ಅಹೋರಾತ್ರ ತರಾಟೆ!

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಕೇಸ್‌ನಲ್ಲಿ ದರ್ಶನ್ ಆರೋಪಿಯಾಗಿ ಜೈಲು ಸೇರಿದ್ದಾರೆ. ಈ ಸಂಬಂಧ ಕನ್ನಡದ ಚಿತ್ರರಂಗದ ನಿರ್ಮಾಪಕರು, ನಟ-ನಟಿಯರು ದರ್ಶನ್ ಬೆಂಬಲಕ್ಕೆ ನಿಂತಿದ್ದಾರೆ. ದರ್ಶನ್‌ ಹತ್ಯೆ ಮಾಡಿದ್ದಾರೆ ಅನ್ನೋದಕ್ಕೆ ಯಾವುದೇ ಸಾಕ್ಷಿಯಿಲ್ಲ ಅಂತ ಕೆಲವರು ವಾದ ಮಾಡುತ್ತಿದ್ದಾರೆ. ಇನ್ನು ಕೆಲವರು ಅವರು ಕೊಲೆ ಮಾಡಿದರೂ ಅವರನ್ನೇ ಬೆಂಬಲಿಸುತ್ತೇನೆ ಎನ್ನುತ್ತಿದ್ದಾರೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ನೇರವಾಗಿ ಭಾಗಿಯಾಗಿದ್ದಾರಾ? ಇಲ್ಲ ಪರೋಕ್ಷವಾಗಿ ಭಾಗಿಯಾಗಿದ್ರಾ? ಇಂತಹ ಪ್ರಶ್ನೆಗಳಿಗೆ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ ಬಳಿಕ ಗೊತ್ತಾಗಲಿದೆ. ಆದರೆ, ಪೊಲೀಸರು ಯಾರನ್ನಾದರೂ ಸುಖಾಸುಮ್ಮನೆ, ಅದರಲ್ಲೂ ದರ್ಶನ್ ಅಂತ ಸೆಲೆಬ್ರೆಟಿಯನ್ನು ಬಂಧಿಸುವುದಕ್ಕೆ ಸಾಧ್ಯವಿಲ್ಲ ಅನ್ನೋದನ್ನು ಗಮನದಲ್ಲಿಟ್ಟುಕೊಳ್ಳಬೇಕು.