Current Date 29 Sep, 2026

ವರ್ತೂರು ಸಂತೋಷ್‌ಗೆ 'I Love You'ಎಂದ ತನಿಷಾ ಕುಪ್ಪಂಡ; ಬೆಂಕಿಗೆ ಹಳ್ಳಿಕಾರ್ ಕೊಟ್ಟ ಪ್ರತಿಕ್ರಿಯೆ ಏನು?

ಬಿಗ್‌ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ ಅದೆಷ್ಟೋ ಸ್ಪರ್ಧಿಗಳು ಇನ್ನೂ ಮನೆಯೊಳಗಿನ ಬಾಂಧವ್ಯವನ್ನು ಹಾಗೇ ಉಳಿಸಿಕೊಂಡಿದ್ದಾರೆ. ಅದರಲ್ಲೂ ಕಳೆದ ಸೀಸನ್ ಬಿಗ್‌ ಬಾಸ್ ಕನ್ನಡ ಇತಿಹಾಸದಲ್ಲೇ ಬೆಸ್ಟ್. ಅದರಲ್ಲಿ ಬಂದ ಸ್ಪರ್ಧಿಗಳು ಇಂದಿಗೂ ಜನ ಮಾನಸದಲ್ಲಿ ಉಳಿದುಕೊಂಡಿದ್ದಾರೆ. ಅದರಲ್ಲೂ ವರ್ತೂರ್ ಸಂತೋಷ್ ಹಾಗೂ ತನಿಷಾ ಕುಪ್ಪಂಡ ಕೂಡ ಇದ್ದಾರೆ. ಈ ರಿಯಾಲಿಟಿ ಶೋ ಮೂಲಕ ತನಿಷಾ ಕುಪ್ಪಂಡ 'ಬೆಂಕಿ' ಅಂತ ಪಟ್ಟ ಪಡೆದುಕೊಂಡು ಹೊರ ಬಂದಿದ್ದಾರೆ. ಹಾಗೇ ಹಳ್ಳಿಕಾರ್ ಒಡೆಯ ಅಂತಲೇ ಜನಪ್ರಿಯರಾಗಿರುವ ವರ್ತೂರು ಸಂತೋಷ್‌ ಅವರನ್ನೂ ಜನರು ಇಷ್ಟ ಪಟ್ಟಿದ್ದರು. ಅದರಲ್ಲೂ ವರ್ತೂರು ಸಂತೋಷ್ ಹಾಗೂ ತನಿಷಾ ಜೋಡಿಗೆ ವೀಕ್ಷಕರು ಮೆಚ್ಚುಗೆ ಸೂಚಿಸಿದ್ದರು. ಬಿಗ್ ಬಾಸ್ ಮನೆಯೊಳಗೆ ಇರುವಾಗಲೇ ಈ ಜೋಡಿಯ ನಡುವೆ ಏನೋ ಇದೆ ಅನ್ನೋ ಸುದ್ದಿ ಹಬ್ಬಿತ್ತು.