Current Date 01 Aug, 2026

'ಕಾಂತಾರ'-1 ಚಿತ್ರದ ಜ್ಯೂನಿಯರ್ ಆರ್ಟಿಸ್ಟ್‌ಗಳಿಗೆ ಹೊಂಬಾಳೆ ಸಂಸ್ಥೆಯಿಂದ ಅನ್ಯಾಯ?

ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸುತ್ತಿರುವ 'ಕಾಂತಾರ' ಚಾಪ್ಟರ್- 1 ಸಿನಿಮಾ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಸದ್ಯ 60 ದಿನಗಳ ದೊಡ್ಡ ಶೆಡ್ಯೂಲ್ ಆರಂಭವಾಗಿದ್ದು ಇನ್ನೆರಡು ತಿಂಗಳಲ್ಲಿ ಸಿನಿಮಾ ಶೂಟಿಂಗ್ ಕಂಪ್ಲೀಟ್ ಆಗುವ ನಿರೀಕ್ಷೆಯಿದೆ. ಹಾಲಿವುಡ್ ತಂತ್ರಜ್ಞರು ಕೂಡ ತಂಡವನ್ನು ಸೇರಿಕೊಂಡಿದ್ದಾರೆ.

ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ದೊಡ್ಡ ದೊಡ್ಡ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. 'ಕಾಂತಾರ'-1 ಜೊತೆಗೆ 'ಸಲಾರ್-2' ಚಿತ್ರೀಕರಣ ಕೂಡ ನಡೀತಿದೆ. ಇದೆಲ್ಲದರ ನಡುವೆ ಪ್ರಭಾಸ್ ಜೊತೆ ಮತ್ತೆರಡು ಚಿತ್ರಗಳನ್ನು ಸಂಸ್ಥೆ ಘೋಷಿಸಿದೆ. ರಿಷಬ್ ಶೆಟ್ಟಿ ಜೊತೆಗೆ ಮತ್ತೆ ಸಿನಿಮಾಗಳನ್ನು ಮಾಡುತ್ತಾರೆ ಎಂದು ಹೇಲಲಾಗುತ್ತಿದೆ. 'ಕಾಂತಾರ'-1 ಸಿನಿಮಾ ಮುಂದಿನ ಆಗಸ್ಟ್ ವೇಳೆಗೆ ತೆರೆಗೆ ಬರಲಿದೆ.