Current Date 01 Aug, 2026

'ಮಫ್ತಿ'-2 ಚಿತ್ರದಲ್ಲಿ 'ಭೈರತಿ ರಣಗಲ್' ಎದುರು ಸ್ಯಾಂಡಲ್‌ವುಡ್ 'ಭೀಮ'?

ನರ್ತನ್ ನಿರ್ದೇಶನದಲ್ಲಿ 'ಭೈರತಿ ರಣಗಲ್' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ಶಿವಣ್ಣನ ಖಡಕ್ ನಟನೆಗೆ ಸಿನಿರಸಿಕರು ಫಿದಾ ಆಗಿದ್ದಾರೆ. ಫಸ್ಟ್ ವೀಕೆಂಡ್ ಎಲ್ಲೆಡೆ ಹೌಸ್‌ಫುಲ್ ಪ್ರದರ್ಶನ ಕಂಡ ಸಿನಿಮಾ 2ನೇ ವಾರಕ್ಕೆ ಕಾಲಿಡುತ್ತಿದೆ.ಈಗಾಗಲೇ 'ಭೈರತಿ ರಣಗಲ್' ಕಥೆಯನ್ನು ಮುಂದುವರೆಸುವುದಾಗಿ ಶಿವರಾಜ್‌ಕುಮಾರ್ ಹೇಳಿದ್ದಾರೆ. ನರ್ತನ್ ಬಗ್ಗೆ ಈಗಾಗಲೇ ಚರ್ಚೆ ನಡೆಸಿರುವುದಾಗಿಯೂ ತಿಳಿಸಿದ್ದಾರೆ. ಇನ್ನೆರಡು ವರ್ಷಗಳ ಬಳಿಕ ಸಿನಿಮಾ ಶುರುವಾಗುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ. ತಮ್ಮದೇ ಗೀತಾ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ಮಾಡುವ ಲೆಕ್ಕಾಚಾರದಲ್ಲಿದ್ದಾರೆ.