Current Date 01 Aug, 2026

'ವಿಜಯ್ 69' ಅಲ್ಲ.. ಅಮೆರಿಕದಿಂದ ಮರಳಿದ ಬಳಿಕ ಶಿವಣ್ಣ ನಟಿಸಲಿರುವ ಬಿಗ್ ಸಿನಿಮಾ ಇದೇನೆ!

ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ನಟನೆಯ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಭೈರತಿ ರಣಗಲ್' ರಿಲೀಸ್‌ಗೆ ಕ್ಷಣಗಣನೆ ಶುರುವಾಗಿದೆ. ಮತ್ತೊಮ್ಮೆ ಶಿವಣ್ಣನನ್ನು ಮಾಸ್ ಅವತಾರದಲ್ಲಿ ನೋಡುವುದಕ್ಕೆ ಅವರ ಹುಡುಗರು ತುದಿಗಾಲಲ್ಲಿ ನಿಂತಿದ್ದಾರೆ. ಈಗಾಗಲೇ ಶಿವಣ್ಣ ಕೂಡ 'ಭೈರತಿ ರಣಗಲ್' ಸಿನಿಮಾ ಬಗ್ಗೆ ಸಾಕಷ್ಟು ಇಂಟ್ರೆಸ್ಟಿಂಗ್ ವಿಷಯಗಳ ಬಿಟ್ಟಿಕೊಟ್ಟಿದ್ದಾರೆ.

ಕನ್ನಡ ಚಿತ್ರರಂಗದ ಎವರ್‌ಗ್ರೀನ್ ಹೀರೋ ಶಿವರಾಜ್‌ಕುಮಾರ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಸದ್ಯ ಅನಾರೋಗ್ಯ ಹಿನ್ನೆಲೆ ಶೂಟಿಂಗ್ ಬ್ರೇಕ್ ಕೊಟ್ಟಿದ್ದು, ಸಿನಿಮಾಗಳ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಅವರ ಇನ್ನೊಂದು ಸಿನಿಮಾ ಅರ್ಜುನ್ ಜನ್ಯ ನಿರ್ದೇಶಿಸಿದ '45' ಕೂಡ ಶೂಟಿಂಗ್ ಕೂಡ ಕಂಪ್ಲೀಟ್ ಆಗಿದೆ.