Current Date 31 Jul, 2026

"ಸಂಗಮೇಶ್ವರ ಮಹಾರಾಜರು" ಸಿನಿಮಾದ ಮೊದಲ ಹಾಡು ಬಿಡುಗಡೆ

ಬಾಗಲಕೋಟೆ :  "ಸಮರ್ಥ ಸದ್ಗುರು ಶ್ರೀ ಸಂಗಮೇಶ್ವರ ಮಹಾರಾಜರು" ಚಲನಚಿತ್ರದ ಲಿರಿಕಲ್‌ ವಿಡಿಯೋ ಹಾಡು ನವೆಂಬರ್ 21ರಂದು "ಶ್ರೀ ಸದ್ಗುರು ಸಂಗಮೇಶ್ವರ ಮಹಾರಾಜರ 93ನೇ" ಪುಣ್ಯಸ್ಮರಣೆಯಂದು ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹಿಪ್ಪರಗಿಯಲ್ಲಿ ಶ್ರೀ ಸದ್ಗುರು ಪ್ರಭುಜಿ ಮಹಾರಾಜರಿಂದ "ಸ್ವರೂಪ ಸಂದರ್ಶನ" ಯೂಟ್ಯೂಬ್ ಮೂಲಕ ಬಿಡುಗಡೆಯಾಗಿದೆ.

ಶ್ರೀ ಗಿರಿಮಲ್ಲೇಶ್ವರ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ಶ್ರೀ ಸದ್ಗುರು ಪ್ರಭುಜೀ ಮಹಾರಾಜರ ಮಾರ್ಗದರ್ಶನದಲ್ಲಿ "ಮಾಧವಾನಂದ ಯೋ ಶೇಗುಣಸಿ" ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದು "ಇಂಚಗೇರಿ ಅಧ್ಯಾತ್ಮ ಸಾಂಪ್ರದಾಯ ಗುರುಲಿಂಗ ಜಂಗಮ ಮಹಾರಾಜ" ಭಕ್ತಿಯ ಸಾಲುಗಳನ್ನು ನಿರ್ದೇಶಕ ರಾಜರವಿಶಂಕರ್ (ವಿ ರವಿ) ಬರೆದಿದ್ದು, ಈ ಹಾಡನ್ನು ರವೀಂದ್ರ ಸೊರಗಾವಿ ಹಾಡಿದ್ದಾರೆ. ಎ ಟಿ ರವೀಶ್ ಸಂಗೀತ ನೀಡಿದ್ದಾರೆ. 
ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಲಿರಿಕಲ್‌ ವಿಡಿಯೋ ವೀಕ್ಷಿಸಿದ ಸುದರ್ಶನ ಮಹಾರಾಜ ಕಡಕಿ, ಆನಂದಸಿದ್ದ ಮಹಾರಾಜ ಅಸುರ್ಲೆ, ಮಹಾದೇವ ಮಹಾರಾಜ ನಂದಗಾಂವ, ಸಿದ್ದಾರೂಢ ಶರಣರು ಹಿಪ್ಪರಗಿ,ಸಿದ್ದಲಿಂಗ ಮಹಾರಾಜರು ಹಿಪ್ಪರಗಿ, ಶಾಸಕ ಸಿದ್ದು ಸವದಿ, ಸಿದ್ದು ಕೊಣ್ಣೂರ, ಗಿರೀಶ್ ಜಿಡ್ಡಿಮನಿ,ಭಾವುರಾಜ ಜಿಡ್ಡಿಮನಿ, ನಟ ವಿಶ್ವಪ್ರಕಾಶ್ ಟಿ ಮಲಗೊಂಡ ಸೇರಿದಂತೆ ಸಾಧು ಸತ್ಪುರುಷರು ಗಣ್ಯರು ಉಪಸ್ಥಿತರಿದ್ದರು.